ಶುಕ್ರವಾರದೊಳಗೆ ಬಲ ಪರೀಕ್ಷೆ ಬಗ್ಗೆ ನಿರ್ಧಾರ: ಸುಪ್ರೀಂಗೆ ಕೇಂದ್ರ
Update: 2016-05-04 23:47 IST
ಹೊಸದಿಲ್ಲಿ, ಮೇ 4: ಉತ್ತರಾಖಂಡ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆ ನಡೆಸುವ ಆಯ್ಕೆಯನ್ನು ತಾನು ಗಂಭೀರವಾಗಿ ಪರಿಶೀಲಿಸುತ್ತಿದ್ದೇನೆಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ಬುಧವಾರ ತಿಳಿಸಿದೆ.
ಉತ್ತರಾಖಂಡ ವಿಧಾನ ಸಭೆಯಲ್ಲಿ ಸುಪ್ರೀಂಕೋರ್ಟ್‌ನ ನಿಗಾದಲ್ಲಿ ಬಲ ಪರೀಕ್ಷೆ ನಡೆಸುವ ಬಗ್ಗೆ ಪರಿಗಣಿಸುವಂತೆ ನ್ಯಾಯಾಲಯವು ನಿನ್ನೆ ಸರಕಾರಕ್ಕೆ ಸೂಚಿಸಿತ್ತು. ಬಲ ಪರೀಕ್ಷೆಯ ಕುರಿತು ನಿರ್ಧರಿಸಲು ಹಾಗೂ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಕೇಂದ್ರವು 48 ತಾಸುಗಳ ಕಾಲಾವಕಾಶ ಕೇಳಿದುದರಿಂದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ 6ಕ್ಕೆ ಮೂಂದೂಡಿತು.