ರಾಜ್ಯಸಭಾ ಸದಸ್ಯರಾಗಿ ಪಾಂಡ್ಯ ನಾಮಕರಣ
Update: 2016-05-04 23:55 IST
ಹೊಸದಿಲ್ಲಿ,ಮೇ 4: ಅಖಿಲ ವಿಶ್ವ ಗಾಯತ್ರಿ ಪರಿವಾರ್(ಎಡಬ್ಲೂಜಿಪಿ)ನ ಮುಖ್ಯಸ್ಥ ಪ್ರಣವ ಪಾಂಡ್ಯ(65) ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮೋದಿ ಸರಕಾರವು ಬುಧವಾರ ನಾಮಕರಣಗೊಳಿಸಿದೆ.
ಎ.22ರಂದು ಸುಬ್ರಮಣಿಯನ್ ಸ್ವಾಮಿ, ಸುರೇಶ್ ಗೋಪಿ, ಮೇರಿ ಕೋಮ್ ಸೇರಿದಂತೆ ಆರು ಜನರನ್ನು ರಾಜ್ಯಸಭೆಗೆ ನಾಮಕರಣಗೊಳಿಸಲಾಗಿತ್ತು.
ಮುಂಬೈ ಸಂಜಾತ ಪಾಂಡ್ಯ ವೈದ್ಯಕೀಯದಲ್ಲಿ ಎಂಡಿ ಪಡೆದಿದ್ದಾರೆ.
ಹರಿದ್ವಾರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಎಡಬ್ಲೂಜಿಪಿ ವೈದಿಕ ಋಷಿಗಳ ಪದ್ಧತಿಗಳನ್ನು ಆಧುನಿಕ ರೀತಿಯಲ್ಲಿ ಅಳವಡಿಸಿಕೊಂಡು ಕಾರ್ಯಾಚರಿಸುತ್ತಿದೆ.