ಗ್ರಾಮದ ಅಭಿಮಾನಕ್ಕೆ ಕಳಂಕ ತಂದಿಟ್ಟಳು ಎಂದು ಆರೋಪಿಸಿ 16 ವರ್ಷದ ಬಾಲಕಿಯನ್ನು ಜೀವಂತ ದಹಿಸಿ ಕೊಂದರು!
Update: 2016-05-06 16:11 IST
ಇಸ್ಲಾಮಾಬಾದ್, ಮೇ 6: ನೆರೆಯವಳಾದ ಯುವತಿಯನ್ನು ಓಡಿಹೋಗಲು ನೆರವಾದಳೆಂದು ಆರೋಪಿಸಿ ಹದಿನಾರು ವರ್ಷದ ಬಾಲಕಿಯನ್ನು ಜೀವಂತ ದಹಿಸಿದ ಘಟನೆ ಪಾಕಿಸ್ತಾನದಿಂದ ವರದಿಯಾಗಿದೆ. ಓಡಿಹೋಗಲು ನೆರವಾಗಿ ಗ್ರಾಮದ ಗೌರವಕ್ಕೆ ಚ್ಯುತಿ ತಂದಿದ್ದಾಳೆ ಎಂದು ಹೇಳಿ ಅಬಾಟಾಬಾದ್‌ನ ಗೋತ್ರಸಭೆ ಬಾಲಕಿಯನ್ನುಬೆಂಕಿ ಹಚ್ಚಿ ಕೊಲ್ಲಲು ಆದೇಶಿಸಿತ್ತು.
ಗೋತ್ರಸಭೆ ನಿರ್ದೇಶನದಂತೆ ಬಾಲಕಿಯನ್ನು ಗ್ರಾಮದ ಹೊರಗೆ ಬಂಧಿಸಿಡಲಾಗಿತ್ತು. ಗೋತ್ರಸಭೆಯ ತೀರ್ಪು ಬಂದ ಮೇಲೆ ನೆರೆಮನೆಯ ಹುಡುಗಿ ಮತ್ತು ಹುಡುಗ ಓಡಿಹೋಗಲು ಬಳಸಿದ ವ್ಯಾನ್‌ಗೆ ಕಟ್ಟಿಹಾಕಿ ಬೆಂಕಿಹಚ್ಚಲಾಗಿತ್ತು. ಘಟನೆಯ ಕುರಿತು ಬಾಲಕಿಯ ಅಮ್ಮ ಮತ್ತು ಸಹೋದರ ಸಹಿತ 15 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.