ಎಸ್.ಡಿ.ಪಿ.ಐ ಅಮೆಮಾರ್ ಘಟಕದಿಂದ ಕುಡಿಯುವ ನೀರಿಗಾಗಿ ಮನವಿ

Update: 2016-05-06 13:52 GMT

ಮಂಗಳೂರು, ಮೇ 6: ಪುದು ಗ್ರಾಮದ ಅಮೆಮಾರಿನಲ್ಲಿ ಎರಡು ವಾರ್ಡ್‌ಗಳಿದ್ದು ಸುಮಾರು 2,000 ಜನಸಂಖ್ಯೆಯಿದೆ. ಎತ್ತರದ ಪ್ರದೇಶಗಳಲ್ಲಿ ವಾಸವಾಗಿರುವ ಜನರು ನೀರಿನ ಅಭಾವ ಎದುರಿಸುತ್ತಿದ್ದು ನಳ್ಳಿ ನೀರನ್ನೇ ಅವಲಂಬಿಸಿದ್ದಾರೆ.

ಇದೀಗ ಪೈಪ್ ನೀರು ಮೂರು ದಿನಕ್ಕೆ ಒಂದು ಸಲ ಬರುತ್ತಿದ್ದು ತೀವ್ರ ನೀರಿನ ಅಭಾವ ಎದುರಾಗಿದೆ. ಈ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಅಮೆಮಾರ್ ಘಟಕದ ವತಿಯಿಂದ ಬಂಟ್ವಾಳ ತಹಶೀಲ್ದಾರ್, ಮತ್ತು ಪುದು ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಲಾಯಿತು.

ಎಸ್‌ಡಿಪಿಐ ವಲಯಾಧ್ಯಕ್ಷ ಸುಲೈಮಾನ್ ಉಸ್ತಾದ್, ಗ್ರಾಮ ಸಮಿತಿ ಸದಸ್ಯ ಇಕ್ಬಾಲ್, ಪುದು ಪಂಚಾಯತ್ ಮಾಜಿ ಸದಸ್ಯ ಮುಹಮ್ಮದ್ ಶಾಫಿ ಅಮೆಮಾರ್, ಅಬ್ದುಲ್ ಖಾದರ್ ಅಮೆಮಾರ್, ಅನ್ಸಾರ್ ಅಮೆಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News