×
Ad

'ಗ್ರೀನ್ ವ್ಯಾಲಿ' ಗೆ ಸತತ 9ನೆ ವರ್ಷ 100% ಫ಼ಲಿತಾಂಶ

Update: 2016-05-06 22:06 IST

100% ಪ್ರಥಮ ಹಾಗು ವಿಶಿಷ್ಟ ದರ್ಜೆಯ ದಾಖಲೆ

ಶಿರೂರು, ಮೇ 6: ಈ ವರ್ಷದ ಐಸಿಎಸ್ಇ ಹತ್ತನೇ ತರಗತಿಯ ಫ಼ಲಿತಾಂಶ ಪ್ರಕಟವಾಗಿದ್ದು ಶಿರೂರಿನ ಪ್ರತಿಷ್ಠಿತ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಹಾಗು ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. 

ಸತತ 9ನೆ ವರ್ಷ ಶಾಲೆ 100% ಫ಼ಲಿತಾಂಶವನ್ನು ದಾಖಲಿಸಿದ್ದು 100% ಪ್ರಥಮ ಹಾಗು ವಿಶಿಷ್ಟ ದರ್ಜೆ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟು 68 ವಿದ್ಯಾರ್ಥಿಗಳಲ್ಲಿ 16 ಮಂದಿ ವಿಶಿಷ್ಟ ದರ್ಜೆ ಹಾಗು  52 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 

469 (94%) ಅಂಕ ಪಡೆದ ಸುನಿಧಿ ಹೆಗ್ಡೆ ಹಾಗು ಸ್ನೇಹ ಎಲ್ಸ ಥೋಮಸ್ ಶಾಲೆಗೆ ಅಗ್ರ ಸ್ಥಾನ ಪಡೆದಿದ್ದಾರೆ. 466 (93%) ಅಂಕ ಪಡೆದ ಮುಹಮ್ಮದ್ ಹಂಝ ಮುಸ್ಬ  ದ್ವಿತೀಯ , 461 (92%) ಅಂಕ ಪಡೆದ ಕ್ರಿಸ್ಟಿ ಬೆನ್ನಿ ಟಿ ಹಾಗು ಐಶ್ವರ್ಯ ಪೂಜಾರ್  ತೃತೀಯ ಸ್ಥಾನ ಪಡೆದಿದ್ದಾರೆ. ಸಯ್ಯದ್ ಅಶ್ಯುಮ್ 459 (91%) ಹಾಗು ಮುಹಮ್ಮದ್ ಅನ್ಶಲ್  90% ಅಂಕಗಳನ್ನು ಪಡೆದಿದ್ದಾರೆ. 

ದಾಖಲೆಯ ಫ಼ಲಿತಾಂಶ ಪಡೆದ ವಿದ್ಯಾರ್ಥಿಗಳು , ಪ್ರಾಂಶುಪಾಲರು ಹಾಗು ಶಿಕ್ಷಕರನ್ನು ಶಾಲೆಯ ಅಧ್ಯಕ್ಷ ಸಯ್ಯದ್ ಅಬ್ದುಲ್ ಖಾದರ್ ಬಾಶು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News