×
Ad

ಕಟ್ಟಡ ಪರವಾನಿಗೆ : ಮೂಡಾದ ಅನುಮತಿಗೆ ವಿನಾಯಿತಿ

Update: 2016-05-06 23:15 IST

ಮೂಡುಬಿದಿರೆ, ಮೇ 6: ಪುರಸಭಾ ವ್ಯಾಪ್ತಿಯ ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಮೂಡಾದಿಂದ ತಾಂತ್ರಿಕ ಒಪ್ಪಿಗೆ ಪಡೆಯಬೇಕೆಂಬ ನಿಯಮಕ್ಕೆ ಸರಕಾರ ತಾತ್ಕಾಲಿಕ ವಿನಾಯಿತಿ ನೀಡಿದೆ ಎಂದು ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ತಿಳಿಸಿದ್ದಾರೆ.

ಈ ಹಿಂದೆ ಕಟ್ಟಡಗಳಿಗೆ ಪರವಾನಿಗೆ ನೀಡುವಾಗ ಮೂಡಾ ನಿಯಮಗಳನ್ನು ಪಾಲಿಸಬೇಕಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತಿತ್ತು. ಮಹಾಯೋಜನೆ ಜಾರಿಯಾಗುವವರೆಗೆ ಪುರಸಭೆಯಿಂದಲೆ ಕಟ್ಟಡ ಪರವಾನಿಗೆ ನೀಡಲು ಅವಕಾಶ ನೀಡಬೇಕೆಂದು ಪುರಸಭೆ ಈ ಹಿಂದೆ ಮಾಸಿಕ ಸಭೆಯ ನಿರ್ಣಯ ಅಂಗೀಕರಿಸಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿತ್ತು.

ಮಹಾಯೋಜನೆ ಜಾರಿಯಾಗುವವರೆಗೆ ಕಟ್ಟಡ ಪರವಾನಿಗೆಗಳನ್ನು ಪುರಸಭೆಯಿಂದಲೆ ನೀಡುವಂತೆ ಸರಕಾರ ನಿರ್ದೇಶನ ನೀಡಿದ್ದು ಹಾಗೂ 19/5/2015ರಂದು ಸರಕಾರವು ಹೊರಡಿಸಿದ್ದ ತಿದ್ದುಪಡಿ ಅಧಿಸೂಚನೆಯಂತೆ ಮಹಾಯೋಜನೆಯನ್ನು ಶೀಘ್ರವಾಗಿ ಸರಕಾರದ ಅನುಮೋದನೆಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಪುರಸಭೆಗೆ ಸೂಚನೆ ನೀಡಿದ್ದಾರೆ ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News