ಮೂಡುಬಿದಿರೆ: ಪುರಸಭಾಧ್ಯಕ್ಷೆಯಿಂದ ಪುಚ್ಚೆಮೊಗರು ಡ್ಯಾಂ ಪರಿಶೀಲನೆ
Update: 2016-05-06 23:19 IST
ಮೂಡುಬಿದಿರೆ, ಮೇ 6: ನೀರಿನ ಮಟ್ಟ ಭಾರೀ ಕುಸಿತ ಕಂಡಿರುವ ಪುಚ್ಚೆಮೊಗರು ಡ್ಯಾಂಗೆ ಪುರಸಬಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಜಲತಜ್ಞ, ಪುರಸಭಾ ಸದಸ್ಯ ಪಿ.ಕೆ ಥೋಮಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೂಪಾ ಸಂತೋಷ್ ಶೆಟ್ಟಿ, ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ನೀರಿನ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಪುಚ್ಚೆಮೊಗರು ಡ್ಯಾಂನಲ್ಲಿ ನೀರಿನಮಟ್ಟ ಸಂಪೂರ್ಣ ಕುಸಿದಿದ್ದು, ಇದಕ್ಕೆ ಪರ್ಯಾಯವಾಗಿ ಜ್ಯೋತಿನಗರದ ಬಳಿಯ ನೀರು ಶುದ್ಧೀಕರಣ ಘಟಕದ ಹತ್ತಿರ ವಿವಿಧ ಕಡೆ ನಾಲ್ಕು ಕೊಳವೆಬಾವಿಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.