×
Ad

ಟ್ರಂಪ್ ಕ್ಷಮೆ ಕೋರಲಾರೆ

Update: 2016-05-06 23:35 IST

ಲಂಡನ್, ಮೇ 6: ಮುಸ್ಲಿಮರ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಲು ಕರೆ ನೀಡುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಸಂಭಾವ್ಯ ರಿಪಬ್ಲಿಕನ್ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್‌ರ ನಿಲುವನ್ನು ಟೀಕಿಸಿರುವುದಕ್ಕೆ ತಾನು ಅವರ ಕ್ಷಮೆ ಕೋರುವುದಿಲ್ಲ ಎಂದು ಬ್ರಿಟಿಶ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿದ್ದಾರೆ.
 ತಾನು ಅಮೆರಿಕದ ಅಧ್ಯಕ್ಷನಾದರೆ ಮುಸ್ಲಿಮರು ಅಮೆರಿಕ ಪ್ರವೇಶಿಸುವುದಕ್ಕೆ ನಿಷೇಧ ವಿಧಿಸುವುದಾಗಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಟ್ರಂಪ್ ಹೇಳಿಕೆ ನೀಡಿದ್ದರು. ಅದನ್ನು ಟೀಕಿಸಿದ್ದ ಕ್ಯಾಮರೂನ್, ಟ್ರಂಪ್‌ರ ನೀತಿಯು ತಪ್ಪು ಹಾಗೂ ಮೂರ್ಖತನದ್ದು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News