×
Ad

ಕುಂಬಳೆ: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುಗಳೊಂದಿಗೆ ಇಬ್ಬರ ಬಂಧನ

Update: 2016-05-07 18:03 IST

ಮಂಜೇಶ್ವರ, ಮೇ 7: ಕಾರಿನಲ್ಲಿ ಸಾಗಿಸುತ್ತಿದ್ದ ಮಾದಕ ವಸ್ತುಗಳೊಂದಿಗೆ ಕರ್ನಾಟಕ ನಿವಾಸಿಗಳಾದ ಇಬ್ಬರನ್ನು ಕುಂಬಳೆ ಅಬಕಾರಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕರ್ನಾಟಕ ನಿವಾಸಿಗಳಾದ ಸಂಜ್ ಪೂಜಾರಿ(28), ಎಸ್.ಆಕಾಶ್(23) ಎಂದು ಗುರುತಿಸಲಾಗಿದೆ.

ಚುನಾವಣಾ ಹಿನ್ನೆಲೆಯಲ್ಲಿ ತಲಪಾಡಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಅಬಕಾರಿ ಪೊಲೀಸರು ಕಾರಿನಲ್ಲಿ ಮಾದಕ ವಸ್ತುಗಳನ್ನು ಸಾಗಿಸುವುದನ್ನು ಪತ್ತೆ ಹಚ್ಚಿದ್ದಾರೆ. ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಇಂಡಿಕಾ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನ ಹಿಂಭಾಗದಲ್ಲಿ ಪ್ಲಾಸ್ಟಿಕ್ ಬ್ಯಾಗೊಂದರಲ್ಲಿರಿಸಲಾಗಿದ್ದ ಡ್ರೈಹಾಶಿಶ್, ಹಾಶಿಶ್ ಆಯಿಲ್, ಎಲ್‌ಎಸ್‌ಡಿ ಹೆಸರಿನ ಮಾದಕ ವಸ್ತುಗಳನ್ನು ಪತ್ತೆಯಾಗಿವೆ. ಈ ಸೊತ್ತುಗಳ ವೌಲ್ಯ ಸುಮಾರು 3.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ತಂಡ ಕಾಲೇಜು ಕ್ಯಾಂಪಸ್‌ನ್ನು ಕೇಂದ್ರೀಕರಿಸಿ ಮಾದಕ ದ್ರವ್ಯ ಮಾರಾಟ ಮಾಡುವ ತಂಡವೆಂದು ಶಂಕಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಅಸಿಸ್ಟಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಎಂ.ಬಿ. ಬಾಬುರಾಜ್, ಸಿವಿಲ್ ಅಧಿಕಾರಿಗಳಾದ ಶ್ರೀನಿವಾಸನ್, ಪ್ರದೀಪ್, ಸುರೇಶ್, ಮಂಜುನಾಥ ಆಳ್ವ , ಎಸ್.ಬಾಲು. ಚಾಲಕ ಸುನಿಲ್ ಕುಮಾರ್ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News