ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್ ಪ್ರಕರಣ: ಕಾಲಿಯಾ ರಫೀಕ್ ಮತ್ತೆ ತ್ರಿಶ್ಶೂರ್ ಕಾರಾಗೃಹಕ್ಕೆ
Update: 2016-05-07 18:39 IST
ಪುತ್ತೂರು, ಮೇ 7: ಪುತ್ತೂರಿನ ರಾಜಧಾನಿ ಜುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿ ಹಾಗೂ ಭೂಗತ ಪಾತಕಿ ಉಪ್ಪಳದ ಕಾಲಿಯಾ ರಫೀಕ್‌ನ ಪೊಲೀಸ್ ಕಸ್ಟಡಿ ಅವಧಿ ಶನಿವಾರ ಕೊನೆಗೊಂಡಿದ್ದು, ಆತನ ವೈದ್ಯಕೀಯ ಪರೀಕ್ಷೆ ನಡೆಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಆರೋಪಿ ಕಾಲಿಯಾ ರಫೀಕ್‌ನನ್ನು ಮತ್ತೆ ಕೇರಳದ ತ್ರಿಶ್ಶೂರ್ ಕಾರಾಗೃಹಕ್ಕೆ ಒಪ್ಪಿಸುವಂತೆ ಪುತ್ತೂರು ನ್ಯಾಯಾಲಯ ಆದೇಶಿಸಿದೆ.
ತ್ರಿಶ್ಶೂರ್ ಕಾರಾಗೃಹದಿಂದ ಬಾಡಿ ವಾರಂಟ್ ಮೂಲಕ ಪುತ್ತೂರು ನಗರ ಪೊಲೀಸರು ತನಿಖೆಗಾಗಿ ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು.