ಗೋವಾ ಶಾಸಕನಿಂದ ಅತ್ಯಾಚಾರ ಪ್ರಕರಣ: ಮೂರನೇ ಆರೋಪಿ ಪೊಲೀಸರಿಗೆ ಶರಣು
Update: 2016-05-07 19:19 IST
ಪಣಜಿ,ಮೇ 7: ಗೋವಾದ ಶಾಸಕ ಅಟಾನ್ಸಿಯೊ ಮೊನ್ಸೆರಾಟೆ ಅವರ ಕೊರಳಿಗೆ ಸುತ್ತಿಕೊಂಡಿರುವ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಮಾನವ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ರೋಸಿ ಫೆರೋರ್ ಶನಿವಾರ ಇಲ್ಲಿಯ ಕ್ರೈ ಬ್ರಾಂಚ್ ಪೊಲೀಸರೆದುರು ಶರಣಾಗಿದ್ದಾಳೆ.
ಫೆರೋರ್ ತನ್ನ ಮಲತಾಯಿಯೊಂದಿಗೆ ಶಾಮೀಲಾಗಿ 50 ಲಕ್ಷ ರೂ.ಗೆ ತನ್ನನ್ನು ಕಳೆದ ಮಾರ್ಚ್‌ನಲ್ಲಿ ಮೊನ್ಸೆರಾಟೆಗೆ ಮಾರಾಟ ಮಾಡಿದ್ದಳು ಎಂದು ಸಂತ್ರಸ್ತ ಬಾಲಕಿ ಆರೋಪಿಸಿದ್ದಾಳೆ.
ಮೊನ್ಸೆರಾಟೆ ಮತ್ತು ಬಾಲಕಿಯ ಮಲತಾಯಿಯನ್ನು ಗುರುವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಇಬ್ಬರಿಗೂ ಮೂರು ದಿನಗಳ ಪೊಲೀಸ್ ಕಸ್ಟಡಿಯನ್ನು ವಿಧಿಸಲಾಗಿದೆ. ಬುಧವಾರ ರಾತ್ರಿ ಪೊಲೀಸರು ಎಫ್‌ಐಆರ್ ದಾಖಲಿಸಿದಾಗಿನಿಂದ ತಲೆಮರೆಸಿಕೊಂಡಿದ್ದ ಫೆರೋರ್ ಇದೀಗ ಪೊಲೀಸರೆದುರು ಶರಣಾಗಿದ್ದು,ಆಕೆಯನ್ನು ಬಂಧಿಸಲಾಗಿದೆ