×
Ad

ಲಾರಿಯಿಂದ ಇಂಜಿನ್ ಆಯಿಲ್ ಸೋರಿಕೆ: ಹಲವು ದ್ವಿಚಕ್ರ ವಾಹನಗಳು ಸ್ಕಿಡ್

Update: 2016-05-07 22:16 IST

ಪುತ್ತೂರು, ಮೇ 7: ಲಾರಿಯೊಂದರಿಂದ ಇಂಜಿನ್ ಆಯಿಲ್ ಸೋರಿಕೆಯಾಗಿ ಹಲವಾರು ದ್ವಿಚಕ್ರ ವಾಹನಗಳು ಪಲ್ಟಿಯಾದ ಘಟನೆ ಶನಿವಾರ ಸಂಜೆ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ನಡೆದಿದೆ.

ದ್ವಿಚಕ್ರ ಸವಾರರಾದ ಓರ್ವ ಮಹಿಳೆ ಮತ್ತು ಮಗುವಿಗೆ ಗಾಯಗಳಾಗಿದೆ. ಸಂಟ್ಯಾರ್ ಕಡೆಯಿಂದ ಮರಳು ತುಂಬಿಸಿಕೊಂಡು ಬರುತ್ತಿದ್ದ ಲಾರಿಯಿಂದ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮುಕ್ರಂಪಾಡಿ ಎಂಬಲ್ಲಿ ಇಂಜಿನ್ ಆಯಿಲ್ ರಸ್ತೆಯಲ್ಲಿ ಸೋರಿಕೆಯಾಗಿತ್ತು. ಈ ವಿಚಾರ ಚಾಲಕನ ಗಮನಕ್ಕೆ ಬಂದಿರದ ಕಾರಣ ಲಾರಿ ಸಾಗುತ್ತಿದ್ದಂತೆ ಸೋರಿಕೆ ನಡೆಯುತ್ತಲೇ ಇತ್ತು.

ರಸ್ತೆಯಲ್ಲಿ ಸಂಚರಿಸಿದ ಸುಮಾರು 15ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಪಲ್ಟಿಯಾಗಿದೆ. ಆದರೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಇಂಜಿನ್ ಆಯಿಲ್ ಸೋರಿಕೆಯಾದ ಲಾರಿಯನ್ನು ಪುತ್ತೂರು ನಗರದ ಸರಹದ್ದಿನ ದರ್ಬೆ ಬೈಪಾಸ್ ಬಳಿಯಲ್ಲಿ ಸಾರ್ವಜನಿಕರು ತಡೆಗಟ್ಟಿ ನಿಲ್ಲಿಸಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News