×
Ad

ಮುಂದಿನ ವಿಚಾರಣೆಗೆ ಹಾಜರಾಗಲು ಮಲ್ಯಗೆ ನ್ಯಾಯಾಲಯದ ತಾಕೀತು

Update: 2016-05-07 22:21 IST

ಮುಂಬೈ,ಮೇ 7: ಮದ್ಯದ ದೊರೆ ವಿಜಯ ಮಲ್ಯ ವಿರುದ್ಧದ ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಉಪನಗರಿ ಅಂಧೇರಿಯ ಮಹಾನಗರ ನ್ಯಾಯಾಲಯವು ಜುಲೈನಲ್ಲಿ ನಡೆಯಲಿರುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಶನಿವಾರ ಅವರಿಗೆ ತಾಕೀತು ಮಾಡಿದೆ. ತಪ್ಪಿದಲ್ಲಿ ಅವರ ವಿರುದ್ಧ ವಾರಂಟ್ ಹೊರಡಿಸುವುದಾಗಿ ಅದು ಎಚ್ಚರಿಕೆ ನೀಡಿದೆ.

ಮಲ್ಯ ಅವರು ಪ್ರವರ್ತಕರಾಗಿರುವ,ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಕಾರವು ಈ ಪ್ರಕರಣವನ್ನು ದಾಖಲಿಸಿದೆ. ಕಿಂಗ್‌ಫಿಷರ್ ಅದಕ್ಕೆ ನೀಡಿದ್ದ 100ಕೋ.ರೂ.ಗಳ ಎರಡು ಚೆಕ್‌ಗಳು ಬ್ಯಾಂಕಿನಿಂದ ಅಮಾನ್ಯಗೊಂಡಿದ್ದವು.
ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಕ ಸಾಲವನ್ನು ಬಾಕಿಯಿರಿಸಿರುವ ಮಲ್ಯ ಸದ್ಯ ಭಾರತದಿಂದ ಪರಾರಿಯಾಗಿ ಲಂಡನ್‌ನಲ್ಲಿ ನೆಲೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News