ಕನ್ನಡಿಗರ ಹಿತರಕ್ಷಣೆಗೆ ಬಿಜೆಪಿ ಬದ್ಧ: ಕೆ ಸುರೇಂದ್ರನ್
ಮಂಜೇಶ್ವರ: ಕೇರಳದ ಭಾಷಾ ಅಲ್ಪಸಂಖ್ಯಾತರ ಸಂರಕ್ಷಣೆ ಹಾಗೂ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ, ಮೂಲಭೂತ ಸಂವಿಧಾನಬದ್ಧ ಅನುಕೂಲತೆ, ಪಿ.ಎಸ್ಸಿ. ಪರೀಕ್ಷೆ ಕನ್ನಡದಲ್ಲಿ ಬರೆಯಲು ಅನುಕೂಲತೆ ಸೇರಿದಂತೆ ಗಡಿನಾಡ ಕನ್ನಡಿಗರ ವಿವಿಧ ಅನುಕೂಲತೆಗೆ ಬಿಜೆಪಿ ಸರ್ವಸನ್ನದ್ಧವಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅ್ಯರ್ಥಿ ಕೆ.ಸುರೇಂದ್ರನ್ ವರ್ಕಾಡಿಯಲ್ಲಿ ಶುಕ್ರವಾರ ನಡೆದ ಚುನಾವಣಾ ಸಭೆಯಲ್ಲಿ ಭರವಸೆ ನೀಡಿದರು.
ಕನ್ನಡ ವಿರೋಧಿ ಅಧಿಸೂಚನೆ ಕೇರಳ ವಿಧಾನಸಭೆಯಲ್ಲಿ ಅನುಮೋದನೆಗೊಂಡಾಗ ಸಹಿ ಹಾಕಿರುವ ಇಲ್ಲಿನ ಶಾಸಕರುಗಳು ಕನ್ನಡ ನಾಡಿಗೆ ಬಾಷಾ ಸಂಗಮ ೂಮಿಗೆ ಅವಮಾನವೆಸಗಿದ್ದಾರೆ.ಜಿಲ್ಲೆಯಲ್ಲಿ ಕನ್ನಡ ಸಂಸ್ಕೃತಿ, ಭಾಷಾ ವೈವಿಧ್ಯತೆ, ರಾಷ್ಟ್ರಕವಿ ಗೋವಿಂದ ಪೈಗಳ ಹಾಗೂ ಕಯ್ಯಾರ ಕಿಂಞಣ್ಣ ರೈಗಳ ಆಶಯಗಳನ್ನು ಜಾರಿಗೊಳಿಸಲು ನ್ಯಾಯಯುತವಾಗಿ ಬಿಜೆಪಿ ಬದ್ದವಾಗಿದೆ ಎಂದು ಹೇಳಿದರು.
ಮುಸ್ಲಿಮ್ ಲೀಗ್, ಎಡರಂಗ ಕನ್ನಡಿಗರನ್ನು ಬಹಿರಂಗವಾಗಿ ಅವಮಾನಿಸುತ್ತಿದೆ. ಆದರೆ, ಬಿಜೆಪಿ ಕನ್ನಡಿಗರ ಹಿತರಕ್ಷಣೆಗೆ ಮತ್ತು ಹಿತರಕ್ಷಣೆಗಾಗಿ ಯಾವ ಹೋರಾಟಕ್ಕೂ ಬದ್ಧವಿದೆ ಎಂದು ಸುರೇಂದ್ರನ್ ಹೇಳಿದರು.
ಪಕ್ಷದ ಮಂಡಲ ಮತ್ತು ಪಂಚಾಯತ್ ಮಟ್ಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.