ಕಾರು ಢಿಕ್ಕಿ: ಪ್ರಾಂಶುಪಾಲರಿಗೆ ಗಾಯ
Update: 2016-05-07 23:24 IST
ಕಾರ್ಕಳ, ಮೇ 7: ಇಲ್ಲಿನ ಮದ್ರಸ ‘ದಾರುಲ್ ಉಲೂಮ್ ಅಲ್ ಮಆರಿಫ್’ದಪ್ರಾಂಶುಪಾಲ ಮುಫ್ತಿ ಅಬ್ದುರ್ರಹ್ಮಾನ್ ಅಲ್ ಕಾಸಿಮಿ ಮದ್ರಸದಿಂದ ಮನೆಗೆ ಬರುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬಲಕಾಲಿಗೆ ಹಾಗೂ ಪಕ್ಕೆಲುಬುಗಳಿಗೆ ತೀವ್ರತರದ ಗಾಯಗಳಾಗಿ ಮೂಳೆ ಮುರಿತಕ್ಕೊಳಗಾಗಿದ್ದಾರೆ. ಇದೀಗ ಕಾರ್ಕಳ ಸಿಟಿ ನರ್ಸಿಂಗ್ ಹೋಮ್ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.