ಪೊಲೀಸ್ ದೌರ್ಜನ್ಯ: ಪ್ರಕರಣ ದಾಖಲು
Update: 2016-05-07 23:26 IST
ಕೋಟ, ಮೇ 7: ಲಾರಿ ಚಾಲಕ ಸಹಿತ ಇಬ್ಬರ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈಯಿಂದ ಮಂಗಳೂರಿಗೆ ಬರುತ್ತಿದ್ದ ವಂಡ್ಸೆ ಗ್ರಾಮದ ಬೆಳಗೇರಿಯ ನಾಗರಾಜ್ ಗಾಣಿಗ (33) ಎಂಬವರ ಲಾರಿಯನ್ನು ಮೇ 5ರಂದು ರಾತ್ರಿ 11:30ಕ್ಕೆ ತೆಕ್ಕಟ್ಟೆ ಗೇಟ್ ಬಳಿ ಪೊಲೀಸರು ತಡೆದು ನಿಲ್ಲಿಸಿ ಲೈಸನ್ಸ್ ಕೊಡು ಎಂದು ಅವಾಚ್ಯ ಶಬ್ದಗಳಿಂದ ಬೈದರು. ಹಾಗೆಲ್ಲ ಮಾತನಾಡಬೇಡಿ ಎಂದು ನಾಗರಾಜ್ ಗಾಣಿಗ ಹೇಳಿದುದಕ್ಕೆ ಗಾಣಿಗ ಮತ್ತವರ ತಮ್ಮನಿಗೆ ಪೊಲೀಸರು ಹಲ್ಲೆಗೈದರು
ಬಳಿಕ ಜೀಪಿನಲ್ಲಿ ಇಬ್ಬರನ್ನು ಠಾಣೆಗೆ ಕರೆದೊಯ್ದು ಎಸ್ಸೈ ಹಾಗೂ ಇತರ 7-8 ಜನರು ಪೊಲೀಸರು ಸೇರಿ ಕೈ ಕಾಲುಗಳನ್ನು ಕಟ್ಟಿ ಥಳಿಸಿದ್ದಾರೆ ಎಂದು ದೂರಲಾಗಿದೆ. ಅದರಂತೆ ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಸಹೋದರರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.