×
Ad

ಮುಡಾ ಕಚೇರಿ: ಸೋಲಾರ್ ಪ್ಯಾನೆಲ್ ಅಳವಡಿಕೆ

Update: 2016-05-07 23:43 IST

ಮಂಗಳೂರು, ಮೇ 7: ಉರ್ವಾಸ್ಟೋರ್‌ನಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಮೇಲ್ಛಾವಣಿಗೆ ಸೋಲಾರ್ ಪ್ಯಾನೆಲ್‌ಗಳ ಅಳವಡಿಕೆ ಕಾರ್ಯ ಶನಿವಾರ ನಡೆಯಿತು.


ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಶಾಸಕ ಜೆ.ಆರ್.ಲೋಬೊ, ಸರಕಾರಿ ಸಂಸ್ಥೆಗಳಲ್ಲಿ ಸೋಲಾರ್ ಘಟಕ ಅಳವಡಿಕೆ ಮಾಡುವ ಮೂಲಕ ಜಿಲ್ಲೆ ಯಲ್ಲಿ ಸೋಲಾರ್ ಕ್ರಾಂತಿ ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ ಎಂದರು. ಮುಡಾದ ಸಭಾಂಗಣವನ್ನು ಉದ್ಘಾ ಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸೋಲಾರ್ ಅಳವಡಿಕೆಯಲ್ಲಿ ರಾಜ್ಯದಲ್ಲಿ ದ.ಕ. ಜಿಲ್ಲೆ 2ನೆ ಸ್ಥಾನದಲ್ಲಿದ್ದು, ಮೊದಲ ಸ್ಥಾನವನ್ನು ಬೆಂಗಳೂರು ಪಡೆದಿದೆ. ಈಗಾಗಲೇ ಜಿಲ್ಲೆಯ 40 ಎಂಡೋಸಲ್ಫಾನ್ ಪೀಡಿತರ ಮನೆಗಳಿಗೆ ಸೋಲಾರ್ ವಿತರಿಸಲಾಗಿದೆ. 50 ಶಾಲೆ, 11 ಪೊಲೀಸ್ ಠಾಣೆಗಳಲ್ಲಿ ಸೋಲಾರ್ ಅಳವಡಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಮುಡಾ ಆಯುಕ್ತ ಮುಹಮ್ಮದ್ ನಝೀರ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಮೊಯ್ದಿನ್ ಬಾವ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಮೇಯರ್ ಹರಿನಾಥ್, ಮನಪಾ ಆಯುಕ್ತ ಗೋಪಾಲಕೃಷ್ಣ, ಕಾರ್ಪೊರೇಟರ್ ರಾಧಾಕೃಷ್ಣ, ಪಿಲಿಕುಳ ನಿಸರ್ಗಧಾಮ ನಿರ್ದೇಶಕ ಪ್ರಭಾಕರ ಶರ್ಮಾ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News