×
Ad

ಮೂಡುಬಿದಿರೆ : ದಕ್ಷಿಣ ವಲಯ ಬಾಲ್‌ಬ್ಯಾಡ್ಮಿಂಟನ್‌ಗೆ ಚಾಲನೆ

Update: 2016-05-08 00:22 IST

ಮೂಡುಬಿದಿರೆ, ಮೇ 7: ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ವಿದ್ಯಾಗಿರಿಯಲ್ಲಿ ನಡೆಯುವ 40ನೆ ದಕ್ಷಿಣ ವಲಯ ಅಂತರ್ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಶನಿವಾರ ಆರಂಭಗೊಂಡಿತು. ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಿ ಮಾತನಾಡಿದ ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಡಾ.ಮೋಹನ್ ಆಳ್ವ ಕ್ರೀಡೆಗೂ ಹೆಚ್ಚಿನ ಆದ್ಯತೆಯನ್ನು ನೀಡಿ ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಕ್ರೀಡಾಪಟು ಗಳನ್ನು ದೇಶಕ್ಕೆ ನೀಡಿರುವುದು ಶ್ಲಾಘ ನೀಯ ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ತಮಿಳುನಾಡು ಬಾಲ್‌ಬ್ಯಾಡ್ಮಿಂಟನ್ ಅಸೋಶಿಯೇಶನ್ ಕಾರ್ಯದರ್ಶಿ ಡಾ.ಶ್ರೀನಿವಾಸನ್ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬಾಲ್‌ಬ್ಯಾಡ್ಮಿಂಟನ್ ಫೆೆಡರೇಶನ್ ಉಪಾಧ್ಯಕ್ಷ ಎಲಿಲ್ ಅರಸನ್, ಬಿಬಿಎಫ್‌ಐನ ಮುಖ್ಯ ತರಬೇತುದಾರ ಜ್ಯೋತಿಷನ್, ಕರ್ನಾಟಕ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ದಿನೇಶ್, ಸಾಹಿತಿ ಡಾ.ನಾ.ದಾಮೋದರ ಶೆಟ್ಟಿ, ಚಿತ್ರನಟಿ ಕಾವ್ಯಶ್ರೀ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News