ಜವಾಹರಲಾಲ್ ನೆಹರೂ ಯಾರು ?
ಬಿಕನೇರ್, ಮೇ 8: ರಾಜಸ್ಥಾನದ 8ನೆ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಇತಿಹಾಸದ ಪುಟಗಳಿಂದ ಜವಾಹರ್ ಲಾಲ್ ನೆಹರೂ ಹೆಸರನ್ನು ಅಳಿಸಲಾಗಿದೆ. ದೇಶದ ಮೊದಲ ಪ್ರಧಾನಿ ಯಾರು ಎಂಬುದರ ಬಗ್ಗೆ ಪುಸ್ತಕದಲ್ಲಿ ಯಾವುದೇ ಉಲ್ಲೇಖವಿಲ್ಲ.
ಈ ನೂತನ ಪಠ್ಯಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಆದರೆ ರಾಜಸ್ಥಾನ ರಾಜ್ಯ ಪಠ್ಯಪುಸ್ತಕ್ ಮಂಡಲ್‌ನ ವೆಬ್‌ಸೈಟ್ http://www.rstbraj.in/books.php? #sthash.cs6wB2ph.dpufನಲ್ಲಿ ಇದು ಲಭ್ಯವಿದೆ. ಈ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ, ಸುಭಾಸ್ ಚಂದ್ರ ಬೋಸ್, ವೀರ್ ಸಾವರ್ಕರ್, ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಬಾಲ ಗಂಗಾಧರ ತಿಲಕ್ ಮತ್ತು ಕ್ರಾಂತಿಕಾರಿ ಹೇಮು ಕಲಾನಿ ಹೆಸರುಗಳಿವೆ. ಆದರೆ ನೆಹರೂ ಮತ್ತು ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳಿಲ್ಲ. ಮಹಾತ್ಮಾ ಗಾಂಧಿ ಹತ್ಯೆ ನಾಥೂರಾಂ ಗೋಡ್ಸೆಯಿಂದ ಆಯಿತು ಎಂಬುದರ ಉಲ್ಲೇಖವೂ ಇಲ್ಲ.
ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಶಾಲೆಗಳಲ್ಲಿ ಬೋಧನೆಗೆಂದು ಸಿದ್ಧಪಡಿಸಲಾದ ಈ ಪಠ್ಯಪುಸ್ತಕವನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಉದಯಪುರ- ವತಿಯಿಂದ ಪುನಾರಚಿಸಲಾಗಿದೆ.
ಪಠ್ಯಪುಸ್ತಕದ ಹಿಂದಿನ ಆವೃತ್ತಿಗಳಲ್ಲಿ ರಾಷ್ಟ್ರೀಯ ಆಂದೋಲನದ ಪಾಠದಲ್ಲಿ ನೆಹರೂ ಕುಟುಂಬದ ಇತಿಹಾಸವಿತ್ತು.