ಜಿಶಾ ಕೊಲೆ ಪ್ರಕರಣ: ಇನ್ನೋರ್ವ ಪೊಲೀಶರ ವಶಕ್ಕೆ
Update: 2016-05-08 10:54 IST
ಕೊಚ್ಚಿ, ಮೇ 8: ಪೆರುಂಬಾವೂರ್‌ನ ಕಾನೂನು ವಿದ್ಯಾರ್ಥಿನಿ ಜಿಶಾ ಕೊಲೆ ಪ್ರಕರಣದಲ್ಲಿ ಇನ್ನೂ ಒರ್ವನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.ಜಿಶಾ ಸಹೋದರಿ ದೀಪಾಳ ಗೆಳೆಯನಾದ ವಲಸೆ ಕಾರ್ಮಿಕನನ್ನು ಕಸ್ಟಡಿಗೆ ಪಡೆಯಲಾಗಿದೆ.
ಕೊಲೆ ನಡೆದ ನಂತರ ಈತ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿತ್ತು. ದೀಪಾ ನೀಡಿದ ಮಾಹಿತಿ ಆಧಾರದಲ್ಲಿ ಬೆಂಗಳೂರಿನಿಂದ ಈತನನ್ನು ಬಂಧಿಸಲಾಗಿದೆ. ಕೇಸಿನ ತನಿಖೆಯ ಮೇಲ್ನೋಟವನ್ನು ಡಿಜಿಪಿ ವಹಿಸಿಕೊಂಡಿದ್ದರು