×
Ad

ಛತ್ತೀಸ್‌ಗಡ ಬಿಜೆಪಿ ನಾಯಕನ ಪುತ್ರನನ್ನು ಬಂಧಿಸಿದ್ದಕ್ಕೆ ಪೊಲೀಸಪ್ಪನಿಗೆ ಠಾಣೆಯೊಳಗೆ ಬಿತ್ತು ಪೆಟ್ಟು !

Update: 2016-05-08 11:17 IST

ಛತ್ತೀಸ್‌ಗಡ ಮೇ 8: ಛತ್ತೀಸ್ ಗಡದ ಮಹಾಸಮುಂದ್‌ನಲ್ಲಿ ಒಬ್ಬ ಪೊಲೀಸನಿಗೆ ಪೊಲೀಸ್ ಠಾಣೆಯೊಳಗೆ ಯದ್ವಾತದ್ವಾ ಹೊಡೆತ ನೀಡಲಾಗಿದೆ. ಯಾವುದೋ ಬಿಜೆಪಿ ನಾಯಕನ ಮಗನನ್ನು ಯಾವುದೋ ಪ್ರಕರಣಕ್ಕೆ ಆತ ಬಂಧಿಸಿದ್ದು ಅವನ ಅಪರಾಧವಾಗಿತ್ತು. ಆತ ಓರ್ವ ಬಡಪಾಯಿ ಕಾನ್ಸ್‌ಟೇಬಲ್ ಇಷ್ಟೆಲ್ಲ ಅನುಭವಿಸಬೇಕಾಗಿ ಬಂದಿತ್ತು. ಬಿಜೆಪಿ ನಾಯಕನ ಮಗನನ್ನು ಬಂಧಿಸಲಾಗಿದೆ ಎಂದು ತಿಳಿದೊಡನೆ ಬಿಜೆಪಿ ಬೆಂಬಲಿಗರು ಗುಂಪಾಗಿ ಪೊಲೀಸ್ ಠಾಣೆಗೆ ಬಂದು ಬೈಯತೊಡಗಿದಾಗ ಠಾಣಾಧಿಕಾರಿಯೇ ಕಾನ್ಸ್‌ಟೇಬಲ್‌ನನ್ನು ಹೊಡೆದಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್‌ಠಾಣೆಗೆ ನುಗ್ಗಿದ ಬಿಜೆಪಿಯವರು ಗಲಾಟೆ ಮಾಡಿ ಪೊಲೀಸರನ್ನು ಯದ್ವತದ್ವಾ ಬೈಯ್ಯತೊಡಗಿದರು. ಅಷ್ಟರಲ್ಲಿ ಬಂದ ಠಾಣೆ ಅಧಿಕಾರಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆಯುವ ಬದಲಾಗಿ ತನ್ನ ಕಾನ್ಸ್‌ಟೇಬಲ್ ವಿರುದ್ಧವೇ ಕಿಡಿ ಕಾರಿ ಅವನ ಮೇಲೆ ಕೈಎತ್ತಿದ್ದರು.

ಕಾನ್ಸ್‌ಟೇಬಲ್‌ನನ್ನು ಹೊಡೆಯುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ. ವೀಡಿಯೊದಲ್ಲಿ ಪೊಲೀಸಧಿಕಾರಿ ಎಂಎಲ್ ಮೊಟ್ವಾನಿ ಠಾಣೆಯೊಳಗೆಯೇ ಪೊಲೀಸನೊಬ್ಬನಿಗೆ ಹೊಡೆಯುತ್ತಿರುವುದು ಕಾಣಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News