ಜಯಲಲಿತಾ ಮನೆಯಲ್ಲಿ ಕೂತಿರಲು ಬಯಸುತ್ತಾರೆ: ತಮಿಳ್ನಾಡು ಚುನಾವಣಾ ಪ್ರಚಾರದಲ್ಲಿ ರಾಹುಲ್!
ಮಧುರೈ ಮೇ 8: ಎಐಡಿ ಎಂಕೆ ಮುಖ್ಯಸ್ಥೆ ಜೆ. ಜಯಲಲಿತಾರನ್ನು ಉಲ್ಲೇಖಿಸುತ್ತಾ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂದು ಕಳೆದ ವರ್ಷ ಬಂದಿದ್ದ ವಿನಾಶಾಕಾರಿ ನೆರೆಯ ಸಮಯದಲ್ಲಿ ಜನರೆಡೆಗೆ ಹೋಗುವ ಮತ್ತು ಅವರ ದೂರುಗಳನ್ನು ಆಲಿಸುವ ಬದಲಾಗಿ ಜಯಲಲಿತಾ ನಾಲ್ಕು ಗೋಡೆಗಳ ನಡುವೆ ಇರಲು ಬಯಸಿದ್ದರು ಎಂದು ಟೀಕಿಸಿದ್ದಾರೆ.
ನಿರುದ್ಯೋಗ ಸಹಿತ ಬೇರೆ ಬೇರೆ ವಿಷಯಗಳನ್ನೆತ್ತಿ ತಮಿಳ್ನಾಡಿನ ಮುಖ್ಯಮಂತ್ರಿ ವಿರುದ್ಧ ಮಾತಿನಲ್ಲಿ ಗುರಿಯಿಟ್ಟ ರಾಹುಲ್ ಅವರ ಆಡಳಿತಕಾಲದಲ್ಲಿ ಭ್ರಷ್ಟಾರ ಹೆಚ್ಚಳವಾಗಿದೆ ಮತ್ತು ಔದ್ಯೋಗಿಕ ಪ್ರದೇಶದಿಂದ ಹೊರಗಾಗಿದೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ತಮಿಳ್ನಾಡಿನಲ್ಲಿ ಮಾರ್ಚ್ 16 ವಿಧಾನಸಭಾ ಚುನಾವಣೆ ನಡೆಯಲಿದ್ದು. ಡಿಎಂಕೆ ಖಜಾಂಚಿ ಎಂಕೆ ಸ್ಟಾಲಿನ್ ಜೊತೆ ತನ್ನ ಮೊದಲ ಚುನಾವಣಾ ಪ್ರಚಾರವನ್ನು ರಾಹುಲ್ ನಡೆಸಿದರೆಂದು ವರದಿಗಳು ತಿಳಿಸಿವೆ. ಚುನಾವಣೆಯ ರ್ಯಾಲಿಯನ್ನು ಉದ್ದೇಶಿಸಿದ ರಾಹುಲ್ ಗಾಂಧಿ ಕಳೆದ ಸಲ ಮಾನ್ಸೂನ್ ಮಳೆಯ ಕಾಲದಲ್ಲಿ ಚೆನ್ನೈ ಸಹಿತ ದೇಶದ ವಿವಿಧೆಡೆ ಬಂದಿದ್ದ ನೆರೆಯನ್ನು ಉಲ್ಲೇಖಿಸಿ ಜಯಲಲಿತಾರನ್ನು ಟೀಕಿಸಿದ್ದಾರೆ. ನಾಲ್ಕುಗೋಡೆಗಳ ನಡುವೆ ಕುಳಿತಿರುವ ವ್ಯಕ್ತಿ ನಡೆಸುವ ಸರಕಾರ ತಮಿಳ್ನಾಡಿಗೆ ಆವಶ್ಯಕವಲ್ಲ. ಜನರು ಕಷ್ಟದಲ್ಲಿದ್ದಾಗ ನೋಡಲು ಬರುವಂತಹ ಶಿಷ್ಟಾಚಾರವೂ ಇಲ್ಲ. ಚೆನ್ನೈಯಲ್ಲಿ ನೆರೆ ಬಂದಾಗ ಏನಾಯಿತು. "ನಾನು ದಿಲ್ಲಿಯಿಂದ ಇದನ್ನು ನೋಡಲು ಬರಲು ಸಾಧ್ಯವಾಗುತ್ತದೆ ಆದರೆ ಮುಖ್ಯಮಂತ್ರಿ ತಮ್ಮ ಮನೆಯಿಂದ ಹೊರ ಬರಲಿಲ್ಲ ಎಂದು ರಾಹುಲ್ ಹೇಳಿದ್ದಾರೆಂದು ವರದಿಯಾಗಿದೆ.