×
Ad

ಗುಜರಾತ್‌ನಲ್ಲಿ ಭೀಫ್ ಇಟ್ಟುಕೊಂಡಿದ್ದಕ್ಕೆ 3 ವರ್ಷ ಜೈಲು,10,000 ದಂಡ

Update: 2016-05-08 11:38 IST

 ಗುಜರಾತ್, ಮೇ 8: ಗುರಾತ್‌ನಲ್ಲಿ 2014 ಅಕ್ಟೋಬರ್‌ನಲ್ಲಿ ಬೀಫ್ ಇಟ್ಟುಕೊಂಡಿದ್ದಕ್ಕೆ ಬಂಧಿಸಲಾದ ನೌಸಾರಿ ದೇವಧಾ ಗ್ರಾಮದ ರಫೀಕ್ ಖಲೀಫಾ ಎಂಬ ವ್ಯಕ್ತಿಗೆ ಸೂರತ್‌ನ ನ್ಯಾಯಾಲಯವೊಂದು ಮೂರು ವರ್ಷ ಜೈಲುಶಿಕ್ಷೆ ಮತ್ತು ಹತ್ತುಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ ಎಂದು ವರದಿಯಾಗಿದೆ.

ರಫೀಕ್ ವಿರುದ್ಧ ಪ್ರಾಣಿ ಸಂರಕ್ಷಣೆ ಕಾಯ್ದೆ ಕಲಂ-6(1.(2), 8 (4)ಮತ್ತು ಐಪಿಸಿ ಕಲಂ 429 ಮತ್ತು 114ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ರಫೀಕ್ ಬಳಿ 4,000 ರೂಪಾಯಿ ಬೆಲೆಯ 40 ಕೆಜಿ ಭೀಫ್ ವಶಪಡಿಸಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ. ವಿಚಾರಣೆಯಲ್ಲಿ ತಾನು ಹನೀಫ ಮನಿಯತ್ ಎಂಬ ಕಸಾಯಿಯಿಂದ ಭೀಫ್ ಖರೀದಿಸಿದ್ದೆ ಎಂದು ತಿಳಿಸಿದ್ದ. ಈ ಪ್ರಕರಣದಲ್ಲಿ ಹನೀಫ್‌ನನ್ನೂ ಬಂಧಿಸಲಾಗಿತ್ತು. ಆದರೆ ಸಾಕ್ಷ್ಯಗಳ ಕೊರತೆಯಿಂದ ಅವನನ್ನು ಬಿಡುಗಡೆಗೊಳಿಸಲಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ಸಲ್ಲಸಿದ ಚಾಜ್‌ಶೀಟ್‌ನಲ್ಲಿ ಆರು ಸಾಕ್ಷಿಗಳ ಹೆಸರಿದ್ದವು. ಇವರಲ್ಲಿ ಇಬ್ಬರು ಸಂಘಪರಿವಾರದ ‘ಗೋರಕ್ಷಕ’ರಾಗಿದ್ದಾರೆ. ಇವರೇ ರಫೀಕ್ ಖಲೀಫಾನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದರು. ಇವರಲ್ಲದೆ ಫಾರೆನ್ಸಿಕ್ ಲ್ಯಾಬ್‌ನ ಒಬ್ಬ ಅಧಿಕಾರಿ, ಇಬ್ಬರು ಪೊಲೀಸರು ಮತ್ತು ಇನ್ನೊಬ್ಬ ವ್ಯಕ್ತಿ ಕೂಡಾ ಸಾಕ್ಷ್ಯ ನೀಡಿದ್ದರು.

  ರಫೀಕ್‌ನಿಗೆ ಶಿಕ್ಷೆ ಘೋಷಿಸುತ್ತಾ ಎಡಿಶನಲ್ ಜ್ಯೂಡಿಶಿಯಲ್ ಮೆಜಿಸ್ಟ್ರೇಟ್(ಫಸ್ಟ್ ಕ್ಲಾಸ್) ಸಿವಾಯಿ ವ್ಯಾಸ್‌ರು "ಗೋವು ಸಮಾಜ ವರ್ಗದ ಭಾವನೆಗಳೊಂದಿಗೆ ಸೇರಿಕೊಂಡಿರುವುದಾಗಿದೆ. ಹೀಗಿರುವಾಗ ಇನ್ನೊಂದು ಇಂತಹ ಕೆಲಸ ಮಾಡುವ ಮೊದಲು ಯೋಚಿಸುವಂತಹ ಉದಾಹರಣೆಯನ್ನು ಪ್ರಸ್ತುತ ಪಡಿಸಬೇಕಾಗಿಲ್ಲ" ಎಂದಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News