×
Ad

ದೇಶ ಭಕ್ತಿ ಕಡಿಮೆ ತೋರಿಸಿದ್ದಕ್ಕಾಗಿ ಟಿ.ವಿ ಆ್ಯಂಕರ್ ವಜಾ!

Update: 2016-05-08 12:16 IST

  ಚಿಲಿ.ಮೇ 8: ಚಿಲಿಯ ಟಿ.ವಿ ಆ್ಯಂಕರ್ ಶರಾಬಿನ ಬಗ್ಗೆ ಚರ್ಚೆ ನಡೆಸುತ್ತಾ ದೇಶಭಕ್ತಿಯನ್ನು ಕಡಿಮೆ ವ್ಯಕ್ತಪಡಿಸಿದಕ್ಕಾಗಿ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಟಿ.ವಿ ಅ್ಯಂಕರ್ ಶರಾಬು ತಯಾರಕನೊಂದಿಗೆ ನಡೆಸಿದ ಒಂದು ಸಂದರ್ಶನದ ವೇಳೆ ಪೆರುವಿನ ಬ್ರಾಂಡಿಯನ್ನು ಫಿಸ್ಕೊ ಎಂದು ಹೇಳಿದ್ದು ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣ ಎಂದು ವರದಿಯಾಗಿದೆ. ಇದು ಚಿಲಿಯನರಿಗೆ ದೇಶದ್ರೋಹದ ಭಾವನೆಯನ್ನು ಆ್ಯಂಕರ್ ಪ್ರಕಟಿಸಿದಂತೆ ಅನಿಸಿದ್ದರಿಂದ ಆತನ ವಿರುದ್ಧ ಅವರು ಆಕ್ರೋಶಗೊಂಡಿದ್ದರು.

 ಚಿಲಿ ಮತ್ತು ಪೆರು ನಡುವೆ ಶತಮಾನಗಳಿಂದ ಪಿಸ್ಕೊ ಹೆಸರಿನಲ್ಲಿ ವಿವಾದ ನಡೆಯುತ್ತಿರುದ್ದು ಪೆರುವಿನ ತನ್ನ ಭೌಗೋಳಿಕ ಕ್ಷೇತ್ರವನ್ನು ಪಿಸ್ಕೋ ಪ್ರತಿನಿಧಿಸುತ್ತಿದೆ ಎಂದು ಪೆರು ವಾದಿಸುತ್ತಿದೆ. ಚಿಲಿಯು ದಾಳಿಂಬೆಯಿಂದ ತಯಾರಿಸುವ ಬ್ರಾಂಡಿಯ ಹೆಸರು ಅದು ಎಂದು ಹೇಳುತ್ತಿದೆ. ’ಚಿಲಿಯನ್ ಅಸೋಸಿಯೇಶನ್ ಆಫ್ ಪಿಸ್ಕೊ’ ಈ ವಿವಾದದ ಕುರಿತು ಪ್ರತಿಕ್ರಿಯಿಸಿ ಟಿ.ವಿ ಆ್ಯಂಕರ್ ಕ್ರಿಶ್ಚಿಯನ್ ಪಿನೊ ಸಂದರ್ಶನದ ವೇಳೆ ಅತಿಥಿಗೆ ಪೆರುನ ಪಾನೀಯವಾಗಿ ಬ್ರಾಂಡಿಯನ್ನು ನೀಡಬೇಕಿತ್ತು ಎಂದಿದೆ. ಪಿಸ್ಕೊ ಎಂಬುದು ಜನಪ್ರಿಯ ಕಾಕ್‌ಟೈಲ್ ಪಾನಿಯವಾಗಿದೆ. ಪೆರುವಿನ ಜನರು ಇದನ್ನು ಮೊಟ್ಟೆಯ ಬಿಳಿ ಭಾಗ, ಮಂಜುಗಡ್ಡೆ, ನಿಂಬೆಹಣ್ಣು ಮುಂತಾದುವುಗಳನ್ನು ಬಳಸಿ ತಯಾರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News