ಕುಂಟಿಕಾನದಲ್ಲಿ ಬಿಎಂಎಸ್ ಹೋಟೆಲ್ ಶುಭಾರಂಭ
ಮಂಗಳೂರು, ಮೇ 8: ಹೋಟೆಲ್ ಹಾಗೂ ಮೋಟಾರ್ ಸರ್ವಿಸ್ ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬಲ್ಲಾಳ್ ಗ್ರೂಪ್ ನಗರದ ಕುಂಟಿಕಾನದ ಬಳಿ ನಿರ್ಮಿಸಿರುವ ಹೋಟೆಲ್ ಬಿಎಂಎಸ್ ಇಂದು ಶುಭಾರಂಭಗೊಂಡಿತು.
ನೂತನ ಹೋಟೆಲ್‌ನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಕೆಎಂಸಿಯ ಮಾಜಿ ಪ್ರಾಂಶುಪಾಲ ಡಾ.ಕೆ.ಆರ್.ಶೆಟ್ಟಿ, ಸಾರಿಗೆ ಕ್ಷೇತ್ರದಲ್ಲಿ ಸಾಧನೆಯ ಮೂಲಕ ಗುರುತಿಸಿಕೊಂಡಿರುವ ಬಲ್ಲಾಳ್ ಮೋಟಾರ್ಸ್ ಸರ್ವಿಸ್ ಸಂಸ್ಥೆ ಇದೀಗ ಹೋಟೆಲ್ ಉದ್ಯಮದಲ್ಲೂ ಯಶಸ್ಸು ಸಾಧಿಸುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕರ್ಣಾಟಕ ಬ್ಯಾಂಕ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ್ ಭಟ್ ಮಾತನಾಡಿ, ಇಂದು ನೂತನ ಬಿಎಂಎಸ್ ಹೋಟೆಲ್ ನಗರಕ್ಕೊಂದು ಹೆಗ್ಗುರುತು ಆಗಿದೆ ಎಂದರು.
ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಂಗಳೂರಿನಲ್ಲಿ ಸುಸಜ್ಜಿತ ಶುದ್ಧ ಸಸ್ಯಹಾರಿ ಹೋಟೆಲ್‌ವೊಂದರ ಕೊರತೆಯಿತ್ತು. ಅದೀಗ ಬಿಎಂಎಸ್‌ನಿಂದ ತುಂಬಿದಂತಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಜೆ.ಆರ್.ಲೋಬೊ, ವಿನಯ ಹೆಗ್ಡೆ, ಗೋಪಾಲಕೃಷ್ಣ ರಾವ್, ಪಾರ್ಶ್ವನಾಥ್, ವಿಜಯಲಕ್ಷ್ಮೀ ಅಡಿಗ, ಇಂಜಿನಿಯರ್ ಬಸವರಾಜು ಉಪಸ್ಥಿತರಿದ್ದರು.