ಸಾರ್ಥಕತೆಗೆ ಫಲಾಪೇಕ್ಷೆ ಇಲ್ಲದ ಮನಸ್ಸು ಅಗತ್ಯ: ಶಾಸಕ ಎಸ್. ಅಂಗಾರ
ಸುಳ್ಯ: ಜೀವನದಲ್ಲಿ ನಾವು ಸಾರ್ಥಕತೆಯನ್ನು ಮಾಡಬೇಕಾದರೆ ಮನಸ್ಸು ಅಗತ್ಯ. ಮನಸ್ಸು ಇಲ್ಲದಿದ್ದರೆ ಆತ ಯಾವುದೇ ಉನ್ನತ ಮಟ್ಟದಲ್ಲಿದ್ದರೂ ಆತನಿಂದ ಫಲಾಪೇಕ್ಷೆ ಪಡೆಯಲು ಸಾಧ್ಯವಿಲ್ಲ ಎಂದು ಶಾಸಕ ಎಸ್. ಅಂಗಾರ ಹೇಳಿದರು.
ಅವರು ಸುಳ್ಯ ಕೆವಿಜಿ ಕಾನೂನು ಕಾಲೇಜಿನ ಬೆಳ್ಳಿಹಬ್ಬ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ ಬದುಕಿನಲ್ಲಿ ಉನ್ನತ ಸಾಧನೆಗೆ ಏರಲು ಗುರಿ ಅಗತ್ಯ. ಕುರುಂಜಿ ವೆಂಕಟ್ರಮಣ ಗೌಡರು ಉತ್ತಮ ಗುರಿಗಳಲ್ಲಿ ಸಾಗಿ ಉನ್ನತ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಉತ್ತಮ ಮನಸ್ಸಿನ ಮೂಲಕ ಇವತ್ತು ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದು ಹೇಳಿದರು.
ಬೆಳ್ಳಿಹಬ್ಬ ನೆನಪಿನ ಶಿಲಾ ಬರಹವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿ ಶುಭ ಹಾರೈಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಿದರು. ಶಾಸಕ ಎಸ್.ಅಂಗಾರ, ಸಿವಿಲ್ ನ್ಯಾಯಾಧೀಶ ಸರವಣನ್, ಚಿಕ್ಕಮಗಳೂರು ನ್ಯಾಯಲಯದ ನ್ಯಾಯಾಧೀಶ ಅಮರನಾಥ್, ಗುಂಡ್ಲುಪೇಟೆ ನ್ಯಾಯಲಯದ ನ್ಯಾಯಾಧೀಶ ಕಮಲಾಕ್ಷ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಸುಭಾಷ್ ಕೌಡಿಚ್ಚಾರ್, ಕಾನೂನು ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪಡ್ಡಂಬೈಲು ವೆಂಕಟ್ರಮಣ ಗೌಡ, ವಕೀಲರ ಸಂಘದ ಅಧ್ಯಕ್ಷ ನಳಿನ್‌ಕುಮಾರ್ ಕೋಡ್ತುಗುಳಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋ ಡಯಾಗ್ನಿಸಿಸ್ ವಿಭಾಗದ ನಿರ್ದೇಶಕಿ ಡಾ. ಐಶ್ವರ್ಯ ಕೆ.ಸಿ., ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನಲ್ ನಿರ್ದೇಶಕಿ ಶೋಭಾ ಚಿದಾನಂದ, ಕೆ.ಸಿ.ಅಕ್ಷಯ್, ಕಾಲೇಜಿನ ಪ್ರಾಂಶುಪಾಲ ಉದಯಕೃಷ್ಣ, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಜಗದೀಶ ಅಡ್ತಲೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸ್ಥಾಪಕ ಪ್ರಿನ್ಸಿಪಾಲ್ ಪಡ್ಡಂಬೈಲ್ ವೆಂಕಟ್ರಮಣ ಗೌಡ, ಅಮರನಾಥ್, ಕಮಲಾಕ್ಷ, ವಸಂತಕುಮಾರ್ ಕಜ್ಜೋಡಿ ಹಾಗೂ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರುಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ಕಲಾವತಿ ವಂದಿಸಿ, ಪ್ರಿನ್ಸಿಪಾಲ್ ಉದಯಕೃಷ್ಣ ವರದಿವಾಚಿಸಿದರು. ಎನ್ನೆಂಸಿ ಉಪನ್ಯಾಸಕಿ ಬೇಬಿ ವಿದ್ಯಾ, ಬಿಂದು, ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು.