ಪಾಕಿಸ್ತಾನ: 11ರ ಹರೆಯದ ಹಿಂದೂ ಬಾಲಕನ ಅತ್ಯಾಚಾರ-ಕೊಲೆ
ಇಸ್ಲಾಮಾಬಾದ್, ಮೇ 8: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 11ರ ಹರೆಯದ ಹಿಂದೂ ಬಾಲಕನನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಇದು ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದು, ಜನರು ಘಟನೆಯ ಕುರಿತು ಆಗ್ರಹಿಸಿದ್ದಾರೆ.
ಹಿಂದೂ ವೈದ್ಯನೊಬ್ಬನ ಪುತ್ರನ ಹೈದರಾಬಾದ್ ಕ್ಲಬ್ಬೊಂದರೊಳಗೆ ಈಜು ಕೊಳದಲ್ಲಿ ಎ.13ರಂದು ಪತ್ತೆಯಾಗಿತ್ತು. ಲೈಂಗಿಕ ದೌರ್ಜನ್ಯ ಹಾಗೂ ಕೊಲೆಯನ್ನು ಮುಚ್ಚಿ ಹಾಕಲು ಆತನನ್ನು ಕೊಳದಲ್ಲಿ ಉದ್ದೇಶಪೂರ್ವಕವಾಗಿ ಎಲೆಯಲಾಗಿದೆಯೆಂದು ಹುಡುಗನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಕ್ಲಬ್‌ನಲ್ಲಿ ಬಿಗಿ ಭದ್ರತೆಯಿರುವ ಹೊರತಾಗಿಯೂ ಹುಡುಗನು ಒಂದು ತಾಸಿಗೂ ಹೆಚ್ಚು ಸಮಯದಿಂದ ಕಾಣೆಯಾಗಿದ್ದನು. ಆತನ ಮೃತದೇಹವು ಬಳಿಕ, ಮುಖದ ಮೇಲೆ ಚಿತ್ರಹಿಂಸೆಯ ಗಾಯಗಳೊಂದಿಗೆ ಕ್ಮಬ್‌ನ 4 ಅಡಿ ಆಳದ ಈಜು ಕೊಳದಲ್ಲಿ ತೇಲುತ್ತಿದ್ದುದು ಪತ್ತೆಯಾಯಿತೆಂದು ಮೃತನ ತಂದೆ ಚೇತನ್‌ಕುಮಾರ್ ಎಂಬವರು ತಿಳಿಸಿದ್ದಾರೆ.
ಘಟನೆಯ ನಡೆದ ದಿನದಿಂದ, ಮತ್ತೆ ಮತ್ತೆ ವಿನಂತಿಸಿದರೂ. ಕ್ಲಬ್‌ನ ಆಡಳಿತವು ತನಗೆ ಸಿಸಿಟಿವಿ ಚಿತ್ರಾವಳಿಯನ್ನು ಒದಗಿಸಿಲ್ಲವೆಂದು ಅವರು ಆರೋಪಿಸಿದ್ದಾರೆ.
ಹುಡುಗನ ಹತ್ಯೆಯ ಕುರಿತು ತನಿಖೆಗೆ ಆದೇಶಿಸುವಂತೆ ಸಿಂಧ್ ಸರಕಾರವನ್ನು ಪ್ರತಿಭಟನಕಾರರು ಆಗ್ರಹಿಸಿದ್ದಾರೆಂದು ‘ಡಾನ್’ ವರದಿ ಮಾಡಿದೆ.
ಬಾಲಕನು ಕೊಳದೊಳಗೆ ಬಿದ್ದುದಲ್ಲ. ಆತನನ್ನು ಅತ್ಯಾಚಾರ ಮಾಡಿ ಕೊಳಕ್ಕೆ ಎಸೆಯಲಾಗಿದೆಯೆಂದು ರಾಷ್ಟ್ರೀಯ ಅಸೆಂಬ್ಲಿಯ ಮಾಜಿ ಸದಸ್ಯ ಕಿಸ್ಟಾನ್ ಚಂದ್ ಪರ್ವಾನಿ ಹಾಗೂ ಪ್ರಾಂತೀಯ ಅಸೆಂಬ್ಲಿಯ ಮಾಜಿ ಲಚ್ಮಣ್ ಕರ್ಮಣಿ ಆರೋಪಿಸಿದ್ದಾರೆ.
ಅತ್ಯಾಚಾರ ನಡೆಸಿದ ಬಳಿಕ ಬಾಲಕನನ್ನು ಕೊಲ್ಲಲಾಗಿದೆಯೆಂದು ಹಿಂದೂ ಪಂಚಾಯತ್‌ನ ಕಾರ್ಯಕರ್ತ ಕರ್ಮಣಿ ಆಪಾದಿಸಿದ್ದಾರೆ.