×
Ad

ವಾಟ್ಸ್ಆಪ್ ನಲ್ಲಿ ಬರಲಿದೆ ವೀಡಿಯೊ ಕಾಲಿಂಗ್ ಸೌಲಭ್ಯ

Update: 2016-05-09 13:14 IST

ವಾಷಿಂಗ್ಟನ್, ಮೇ 9: ಹಲವಾರು ಹೊಸ ಫೀಚರುಗಳನ್ನು ಸೇರ್ಪಡಿಸಲು ಶ್ರಮಿಸುತ್ತಿರುವ ವಾಟ್ಸೆಪ್ ಇದೀಗ ವೀಡಿಯೊ ಕಾಲಿಂಗ್ ಸೌಲಭ್ಯವನ್ನೂ ಬಳಕೆದಾರರಿಗೆ ಒದಗಿಸಲಿದೆಯೆಂದು ಮಾಹಿತಿಯಿದೆ. ಈ ಹಿಂದೆ ವಾಟ್ಸೆಪ್ ಕಾಲ್ ಬ್ಯಾಕ್, ವಾಯ್ಸ್ ಮೇಲ್ ಫೀಚರುಗಳನ್ನು ಸಾದರಪಡಿಸಲಿದೆಯೆಂದು ಹೇಳಲಾಗಿತ್ತು.

ಗೆಜೆಟ್ 360ಯಲ್ಲಿ ಬಂದ ವರದಿಯೊಂದರ ಪ್ರಕಾರ ಈ ವೀಡಿಯೊ ಕಾಲ್ ಫೀಚರ್ ಬೇಟಾ ಆ್ಯಪ್ ಇರುವ ಕೆಲವೊಂದು ಸಾಧನಗಳಲ್ಲಿ ಮಾತ್ರ ಲಭ್ಯವಿರುತ್ತದೆ ಹಾಗೂ ಬೇರೆ ಸಾಮಾನ್ಯ ಬಳಕೆದಾರರಿಗೆ ಅದು ಲಭ್ಯವಿಲ್ಲವೆಂದು ಹೇಳಲಾಗುತ್ತಿದೆ.

ವಾಟ್ಸೆಪ್ ವಾಯ್ಸ್ ಕಾಲಿಂಗ್ ಫೀಚರ್ ನಂತೆ ವೀಡಿಯೊ ಕಾಲ್ ಫೀಚರ್ ಕೂಡ ಆಹ್ವಾನವಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರಬಹುದೆಂಬ ಮಾಹಿತಿಯೂ ಇದೆ. ಎನ್ ಎಫ್ ಸಿ ಮುಖಾಂತರ ಗ್ರೂಪ್ ಆಹ್ವಾನಗಳನ್ನು ಕಳುಹಿಸುವ ಆಪ್ಶನ್ ಕೂಡ ವಾಟ್ಸೆಪ್ ಅಳವಡಿಸುತ್ತಿದೆಯೆಂದು ಹೇಳಲಾಗುತ್ತಿದೆ.
ಕಳೆದ ತಿಂಗಳ ವರದಿಯೊಂದರ ಪ್ರಕಾರ ಕಂಪೆನಿ ಕಾಲ್ ಬ್ಯಾಕ್ ಫೀಚರನ್ನು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗಾಗಿ ಒದಗಿಸುವುದೆಂದು ಹೇಳಲಾಗಿತ್ತಲ್ಲದೆ ಇದನ್ನು ಉಪಯೋಗಿಸಿ ಬಳಕೆದಾರರು ಕೇವಲ ಬಟನ್ ಒಂದನ್ನು ಒತ್ತಿದರಷ್ಟೇ ಸಾಕು ಆ್ಯಪ್ ತೆರೆಯದೆ ತಮ್ಮ ಸ್ನೇಹಿರಿಗೆ ಕಾಲ್ ಬ್ಯಾಕ್ ಮಾಡಬಹದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News