×
Ad

ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಅವಲೋಕನಾ ಸಭೆ

Update: 2016-05-09 14:17 IST

ಉಡುಪಿ, ಮೇ 9: ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆ ಗಳಲ್ಲೊಂದಾದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನ (DKSC) ಅಧೀನದಲ್ಲಿ ನಡೆಯುತ್ತಿರುವ  ಮೂಳೂರಿನ  ಅಲ್ಇಹ್ಸಾನ್ ವಿದ್ಯಾ ಕೇಂದ್ರದ ಮಹತ್ವಾಕಾಂಕ್ಷೆಯ ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಅವಲೋಕನಾ ಸಭೆ ಇತ್ತೀಚಿಗೆ ದುಬೈಯ ಪ್ಲೋರಾ ಗ್ರಾಂಡ್  ಹೋಟೆಲ್ ನ ಬಾಲ್ ರೂಂ ನಲ್ಲಿ ನಡೆಯಿತು.

ಯು.ಎ.ಇ  ಯಲ್ಲಿ ಇರುವ ಹಲವಾರು ಕನ್ನಡಿಗ ಉದ್ಯಮಿಗಳು ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸವಡಿ ಅರೇಬಿಯಾ ದಿಂದ ಬಂದ ಡಿ.ಕೆ.ಎಸ್.ಸಿ ಕೇಂದ್ರ ಕಮಿಟಿಯ ನೇತಾರರಾದ ಇಸ್ಮಾಯಿಲ್ ಹಾಜಿ ಕಿನ್ಯ , ಹಾಜಿ ಹಾತಿಂ ಕೂಳೂರು, ಹಾಜಿ. ಶೇಖ್ ಬಳ್ಕುಂಜೆ ಹಾಗೂ ಅಬ್ದುಲ್ ಅಝೀಝ್ ಮೂಳೂರು ಸಹಿತ ಹಲವಾರು ಸಾಮಾಜಿಕ  ಮುಂದಾಳುಗಳು ಭಾಗವಹಿಸಿದ್ದರು. ಡಿ.ಕೆ.ಎಸ್.ಸಿ  ಕೇಂದ್ರ ಕಮಿಟಿಯ ಅದ್ಯಕ್ಷರು ಹಾಗೂ ಈ ಕಾರ್ಯಕ್ರಮದ ಅದ್ಯಕ್ಷರೂ ಆಗಿದ್ದ ಅಲ್ ಹಾಜ್ ಶೈಖುನಾ ಸಯ್ಯದ್  ಕೆ.ಯಸ್.ಆಟ್ಟಕೋಯ ತಂಙಳ್   ಕುಂಬೋಲ್ ರವರ  ದುವಾದೊಂದಿಗೆ ಪ್ರಾರಂಭ ಗೊಂಡಿತು.  ಡಿ.ಕೆ.ಎಸ್.ಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಡಿ.ಕೆ.ಎಸ್.ಸಿ  ಅದ್ಯಕ್ಷರಾದ ಎಂ.ಕೆ.ಬ್ಯಾರಿ ಕಕ್ಕಿಂಜೆ ಯವರು ಡಿ.ಕೆ.ಎಸ್.ಸಿ ಯ  ಚಟುವಟಿಕೆಗಳು ಮತ್ತು ಸಾಧನೆಗಳ ಪರಿಚಯ ನೀಡಿದರು. ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಕಮಿಟಿಯ ಚಯರ್ಮೆನ್ ಜ.ಎಂ.ಇ. ಮೂಳೂರು  ಡಿ.ಕೆ.ಎಸ್.ಸಿ ಕೈಗೊಂಡ ಮಹತ್ವಾಕಾಂಕ್ಷೆಯ ಮಹಿಳಾ ಕಾಲೇಜು ಯೋಜನೆಯ ಬಗ್ಗೆ ಪಾಸ್ತಾವಿಸುತ್ತಾ  ಕಟ್ಟಡ ನಿರ್ಮಾಣದ ಕಾಮಗಾರಿಯ  ಬೆಳವಣಿಗೆಯ ಬಗ್ಗೆ ವಿವರಿಸಿದರು. ಡಿ.ಕೆ.ಎಸ್.ಸಿ ಯ ಸಲಹೆಗಾರರಾದ  ಉಸ್ತಾದ್ ಇಬ್ರಾಹಿಂ ಸಖಾಪಿ ಕೆದಂಬಾಡಿ ಯವರು  ಡಿ.ಕೆ.ಎಸ್.ಸಿ ಯ  ಕಿರು  ಪರಿಚಯದೊಂದಿಗೆ  ಸರ್ವರೂ ಈ ಪುಣ್ಯ ಕಾರ್ಯದಲ್ಲಿ ಸಹಕರಿಸಬೇಕೆಂದು ಕೋರಿದರು.

 ಡಿ.ಕೆ.ಎಸ್.ಸಿ ನಡೆದು ಬಂದ ದಾರಿ ಮತ್ತು ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಅದು ನಡೆಸುತ್ತಿರುವ ಕ್ರಾಂತಿಕಾರಕ ಸಮಾಜ ಸೇವಾ ಕಾರ್ಯಕ್ರಮಗಳನ್ನು  ಬಿಂಬಿಸುವ ಅಡಿಯೊ  ವಿಶುಯಲ್ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.  ನಂತರ ಅತಿಥಿಗಳೊಂದಿಗೆ ಈ ಯೋಜನೆಯ ಬಗ್ಗೆ ಅಭಿಪ್ರಾಯ ವಿನಿಮಯ ಮತ್ತು  ಅನಿಸಿಕೆಗಳನ್ನು ಪಡೆಯಲಾಯಿತು.

 ಅಲ್ ಹಾಜ್ ಶೈಖುನಾ ಸಯ್ಯದ್  ಕೆ.ಯಸ್. ಆಟ್ಟಕೋಯ ತಂಙಳ್  ಹಿತವಚನಗಳನ್ನು ನೀಡಿದ ಬಳಿಕ ಮುಖ್ಯ ಅತಿಥಿಗಳಾದ ಡಿ.ಕೆ.ಎಸ್.ಸಿಯ  ಹಿತೈಷಿ  ಹಾಗೂ  ತೋನ್ಸೆ ಮೆಡಿಕಲ್ ಸೆಂಟರ್ ಇದರ ಚಯರ್ಮೆನ್ ಅಲ್ ಹಾಜ್ ಬಿ.ಎಂ.ಜಾಫರ್ , ಡಿ.ಕೆ.ಎಸ್.ಸಿ ಶರೀಹತ್ ಕಾಲೇಜು ಕಟ್ಟಡ ಸಮಿತಿಯ ಚಯರ್ಮೆನ್  ಹಾಗೂ  ಸಮಾಜ ಸೇವಾ ಮುಂದಾಳು ಹಾಜಿ. ಶೇಖ್ ಬಾವ ಮಂಗಳೂರು, ಬ್ಯಾರೀಸ್ ವೆಲ್ಫೇರ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದುಮೂಲೆ ,  ಡಿ.ಕೆ.ಎಸ್.ಸಿ. ಕೇಂದ್ರ ಕಮಿಟಿ ಪ್ರತಿನಿಧಿಗಳಾದ ಇಸ್ಮಾಯಿಲ್ ಹಾಜಿ ಕಿನ್ಯ ,  ಹಾಜಿ ಹಾತಿಂ ಕೂಳೂರು, ಹಾಜಿ ಶೇಖ್ ಬಳ್ಕುಂಜೆ ಹಾಗೂ ಅಬ್ದುಲ್ ಅಝೀಝ್ ಮೂಳೂರು ಮತ್ತು ಅತಿಥಿಗಳಾದ ಲತೀಪ್ ಹಾಜಿ ಬಜ್ಪೆ . ಅಬ್ದುಲ್ ರಝಾಕ್ ಇಸ್ಮಾಯಿಲ್ (DEWA ), ಸಲೀಂ ಅಲ್ತಾಫ್. ಅದ್ಯಕ್ಷರು ದಾರನ್ನೂರ್ ಎಜುಕೇಶನ್ ಸೆಂಟರ್ ,  ತಜಮ್ಮಲ್ ಅಮಾನುಲ್ಲ (ತಂಜೀಮ್ ಆಟೋ ವರ್ಕ್ಸ್), ಮುಹಮ್ಮದ್ ಶರೀಪ್ (ಯುನಿ ಗಲ್ಫ್ ), ಡಿ.ಕೆ.ಎಸ್.ಸಿ  ಮುಂದಾಳು ಹೈದರ್ ಹಾಜಿ ಉಜಿರೆ , ಹಿದಾಯ ಪವ್ಂಡೆಶನ್ ಇದರ ನಾಯಕ ಬಾವಹಾಜಿ, ಕೆ.ಎಸ್.ಸಿ ಯುವ  ಮುಂದಾಳು ವೈ.ಅಬ್ದುಲ್ ರಝಾಕ್ , ಅಶ್ರಪ್ ಕಾನ, ಜ.ಇರ್ಫಾನ್ ಶೇಖ್ ಸಹಿತ ಹಲವಾರು ಗಣ್ಯ ಅತಿಥಿಗಳು  ಡಿ.ಕೆ.ಎಸ್.ಸಿ ಯಸೇವೆಯ  ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು  ವ್ಯಕ್ತ ಪಡಿಸುತ್ತಾ  ವಿದ್ಯಾ ಕ್ಷೇತ್ರದಲ್ಲಿ ಡಿ.ಕೆ .ಎಸ್.ಸಿ  ಮಾಡುತ್ತಿರುವ  ಸಮಾಜಸೇವೆಯನ್ನು ಪ್ರಶಂಶಿಸುತ್ತಾ ಪ್ರಸ್ತುತ ಕೈಗೆತ್ತಿಕೊಂಡಿರುವ   ಅಲ್ ಇಹ್ಸಾನ್ ಮಹಿಳಾ ಕಾಲೇಜಿನ ಯೋಜನೆಗೆ  ತಮ್ಮ ಕೈಲಾದ ಸಹಕಾರಗೈಯುವುದಾಗಿ ಭರವಸೆ ಇತ್ತರು.

 ಡಿ.ಕೆ.ಎಸ್.ಸಿ  ನಾಯಕರುಗಳಾದ ಇಬ್ರಾಹಿಂ ಹಾಜಿ ಕಿನ್ಯ ,ಅಬ್ದುಲ್ ಲತೀಪ್ ಮುಲ್ಕಿ , ಮಹಮ್ಮದ್ ಹಾಜಿ ಅಡ್ಕ, ಯುಸುಪ್ ಅರ್ಲಪದವು, ಇ.ಕೆ.ಇಬ್ರಾಹಿಂ, ಬದ್ರುದ್ದೀನ್ ಹೆಂತಾರ್, ಮುಹಮ್ಮದ್ ರಪೀಕ್ ಆತೂರ್, ಸಮೀರ್ ಕಲ್ಲಾರೆ, ಬದ್ರುದ್ದೀನ್ಅರಂತೂದು, ಹಾಜಿ ಅಬ್ದುಲ್ಲ ಬಿಜಾಡಿ, ಅಬ್ದುಲ್ ರಹಿಮಾನ್ ಸಜಿಪ, ಸೈಫುದ್ದೀನ್  ಪಟೇಲ್ ಮೊದಲಾದವರು ಉಪಸ್ಥಿತರಿದ್ದರು. 

ಡಿ.ಕೆ.ಎಸ್.ಸಿ ಕೋಶಾಧಿಕಾರಿ ಹುಸೈನ್ ಹಾಜಿ ಕಿನ್ಯ ವಂದಿಸಿದರು.

Writer - ಯಸ್ . ಯೂಸುಫ್ ಅರ್ಲಪದವು

contributor

Editor - ಯಸ್ . ಯೂಸುಫ್ ಅರ್ಲಪದವು

contributor

Similar News