×
Ad

ಮೇ 11ರಂದು ಮೂಳೂರು ಮರ್ಕಝ್‌ನಲ್ಲಿ ನೂತನ ಕೋರ್ಸಿಗೆ ವಿದ್ಯಾರ್ಥಿಗಳ ಆಯ್ಕೆ ಪರೀಕ್ಷೆ

Update: 2016-05-09 20:41 IST

ಉಡುಪಿ, ಮೇ 9: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಅಧೀನ ಸಂಸ್ಥೆಯಾದ ಮೂಳೂರಿನ ಮರ್ಕಝ್ ತಅಲೀಮಿಲ್ ಇಹ್ಸಾನಿನಲ್ಲಿ 2016-17 ನೆ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿಗಳಿಗೆ ಕುಂಬೋಲ್ ತಂಙಳ್ ಮತ್ತು ಬೇಕಲ್ ಉಸ್ತಾದರ ನೇತೃತ್ವದಲ್ಲಿ ನೂತನವಾಗಿ ಪ್ರಾರಂಭವಾಗುವ ಇಹ್ಸಾನ್ ಎಜು ಪ್ಲಾನೆಟ್ ಕೋರ್ಸಿಗೆ ಮತ್ತು 8ನೆ ತರಗತಿಯಿಂದ ಪ್ರಾರಂಭವಾಗುವ ಜೂನಿಯರ್ ದಅ್ವಾ ವಿಭಾಗಕ್ಕೂ ಮೇ 11ರಂದು ಆಯ್ಕೆ ಪರೀಕ್ಷೆ ನಡೆಯಲಿದೆ.

ಧಾರ್ಮಿಕವಾಗಿ ಮುಕ್ತಸರ್, ಮುತ್ವವ್ವಲ್ ಪದವಿ ಮತ್ತು ಇಂಗ್ಲಿಷ್ ಮಾಧ್ಯಮ ಕಾಮರ್ಸಿನಲ್ಲಿ ಪಿಜಿವರೆಗೆ ವಿದ್ಯಾಭ್ಯಾಸಕ್ಕೆ ಅವಕಾಶವಿರುವ ಈ ವಿಭಾಗದಲ್ಲಿ ನಂತರ ಅವರ ಅಭಿರುಚಿಗೆ ತಕ್ಕಂತೆ ಮುಂದುವರಿಯಲು ತರಬೇತಿಯನ್ನು ನೀಡಲಾಗುವುದು.

ಆಸಕ್ತ ವಿದ್ಯಾರ್ಥಿಗಳು ರಕ್ಷಕರೊಂದಿಗೆ ಪೂರ್ವಾಹ್ನ 11 ಗಂಟೆಗೆ ಮೂಳೂರಿನ ಮುಖ್ಯ ಕಚೇರಿಯಲ್ಲಿ ಹಾಜರಾಗಬೇಕೆಂದು, ಹೆಚ್ಚಿನ ವಿವರಗಳಿಗೆ ಮೊ.ಸಂ.: 9741503662, 7022967401ನ್ನು ಸಂಪರ್ಕಿಸಬೇಕೆಂದು ಮ್ಯಾನೇಜರ್ ಮೌಲಾನಾ ಮುಸ್ತಫಾ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News