ಉಳ್ಳಾಲ: ನುಸ್ರತುಲ್ ಮಸಕೀನ್ ಚಾರಿಟೇಬಲ್ ಟ್ರಸ್ಟ್‌ನಿಂದ ಕುಡಿಯುವ ನೀರು ಪೂರೈಕೆ
ಉಳ್ಳಾಲ, ಮೇ 9: ನುಸ್ರತುಲ್ ಮಸಕೀನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಳ್ಳಾಲ ನಗರ ಸಬಾ ವ್ಯಾಪ್ತಿಯ ಅಳೇಕಲ,ಮಾರ್ಗತಲೆ ಪಾಂಡಲ್ ಪಕ್ಕ ಪ್ರದೇಶಕ್ಕೆ ದಿನಂಪ್ರತಿ 2 ಟ್ಯಾಂಕರ್ ಕುಡಿಯುವ ನೀರು ಪೂರೈಸುವ ಯೋಜನೆಗೆ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಉಳ್ಳಾಲ ನಗರ ಸಭೆಯು ದಿನಂಪ್ರತಿ 6 ಟ್ಯಾಂಕರ್ ನೀರು ಕೊಡುತ್ತಿದ್ದು ,ಅದು ಸಾಕಾಗದ ಕಾರಣ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ದಿನಂಪ್ರತಿ 2 ಟ್ಯಾಂಕರ್ ನೀರನ್ನು ಸ್ಥಳೀಯ 3 ವಾರ್ಡ್‌ಗಳಿಗೆ ಕೊಡುತ್ತಿರುವುದು ಶ್ಲಾಘನೀಯ ಎಂದರು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಜಿ ಮುಹಮ್ಮದ್ ತೋಹಾ, ಉಪಾಧ್ಯಕ್ಷ ಯು.ಎಸ್.ಹನೀಫ್ , ಕಾರ್ಯದರ್ಶಿ ಕೆ.ಎಮ್.ಮುಹಮ್ಮದ್, ಸದಸ್ಯರಾದ ಎ.ಎ. ಖಾದರ್, ಇಬ್ರಾಹೀಂ ಕಕ್ಕೆತೋಟ, ಯು.ಡಿ.ಇಬ್ರಾಹೀಂ, ಯು.ಎಸ್.ನಝೀರ್, ಯು.ಎ.ಅಶ್ರಫ್, ಇಬ್ರಾಹೀಂ ಖಾಸಿಮ್, ಬಿ.ಎಚ್.ಅಬ್ದುಲ್ ಖಾದರ್, ಜಬ್ಬಾರ್, ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತಾಕ್, ಸದಸ್ಯರಾದ ಯು.ಎ.ಇಸ್ಮಾಯೀಲ್ ಮತ್ತು ಇಬ್ರಾಹೀಂ ಉಪಸ್ಥಿತರಿದ್ದರು.