×
Ad

ಎಸ್‌ಡಿಪಿಐ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ

Update: 2016-05-09 22:43 IST

ಮಂಗಳೂರು, ಮೇ 9: ಎಸ್‌ಡಿಪಿಐ ಸಕಲೇಶಪುರ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶವು ಮೇ 8ರಂದು ಅಲ್ ಅಮೀನ್ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಫ್ಸರ ಕೊಡ್ಲಿಪೇಟೆ, ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಸಮಾವೇಶಕ್ಕೂ ಮುನ್ನ ಮುಂದಿನ ಎರಡು ವರ್ಷಗಳ ಅವಧಿಗೆ ಅಸೆಂಬ್ಲಿ ಸಮಿತಿಯನ್ನು ರಚಿಸಲಾಯಿತು. ಹೊಸ ಸಮಿತಿಯನ್ನು ಎಸ್‌ಡಿಪಿಐ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಘೋಷಿಸಿದರು.

ಸಮಿತಿಯ ಅಧ್ಯಕ್ಷರಾಗಿ ಮೊಯ್ದಿನ್ ಶರೀಫ್, ಕಾರ್ಯದರ್ಶಿಯಾಗಿ ಶಕೀಲ್, ಖಜಾಂಚಿಯಾಗಿ ಸಾದಿಕ್ ಆನೆಮಹಲ್, ಸದಸ್ಯರಾಗಿ ಅನೆಮಹಲ್ ಗ್ರಾಪಂ ಸದಸ್ಯರಾದ ಮಂಜುಳಾ,ಝಹುರಾ ಸಲೀಮ್, ಜಮೀರ್,ಇರ್ಫಾನ್ ಪಾಷ, ಜಮೀರ್ ಆಯ್ಕೆಯಾದರು.

ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಅನ್ವರ ಸಾದತ್ ಸಮಾರೋಪ ಭಾಷಣಗೈದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಪೈರೋಝ್ ಪಾಷ, ಪಿಎಫ್‌ಐನ ಇಮ್ರಾನ್, ಗ್ರಾಪಂ ಸದಸ್ಯರಾದ ಜಹುರಾ ಉಪಸ್ಥಿತರಿದ್ದರು.

ಎಸ್‌ಡಿಪಿಐ ಮುಖಂಡ ಹನೀಫ್ ಮಲ್ನಾಡ್ ಸ್ವಾಗತಿಸಿ, ಶಕೀಲ್ ವಂದಿಸಿದರು. ಸಾದಿಕ್ ಆನೆಮಹಲ್ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News