ಹಲವು ವ್ಯಕ್ತಿಗಳ ಸಮಷ್ಠಿ ಬಸವಣ್ಣ : ಮುನಿರಾಜ ರೆಂಜಾಳ

Update: 2016-05-09 17:22 GMT

ಮೂಡುಬಿದಿರೆ, ಮೇ 9: ದುಡಿಯುವ ಕಲ್ಪನೆಯನ್ನು ಜಗಕ್ಕೆ ರೂಪಿಸಿದವರು ಬಸವಣ್ಣ. ಸುಂದರ ಸಾಮಾಜಿಕ ಕ್ರಾಂತಿಯ ಹರಿಕಾರ ಹಾಗೂ ಶ್ರೇಷ್ಠ ವಚನಕಾರರಾಗಿ ಬಸವಣ್ಣ ಗುರುತಿಸಿಕೊಳ್ಳುತ್ತಾರೆ. ಹಲವು ವ್ಯಕ್ತಿಗಳ ಸಮಷ್ಠಿಯಾಗಿ ಗುರುತಿಸಿಕೊಳ್ಳುವ ಬಸವಣ್ಣನಲ್ಲಿ ಕೃಷ್ಣನ ಚಾಣಕ್ಷತೆ, ಬುದ್ಧನ ದಯೆ, ಮಹಾವೀರನ ಸರಳತೆ, ಕ್ರಿಸ್ತನ ಅನುಕಂಪ, ಮುಹಮ್ಮದ್ ಪೈಗಂಬರರ ಕೆಚ್ಚು ಗುಣಗಳೆಲ್ಲ ಮೇಳೈಸಿದಂತೆ ಕಾಣಿಸಿಕೊಳ್ಳುತ್ತಾರೆ ಎಂದು ಮೂಡುಬಿದಿರೆ ಜೈನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಚಕ್ರವ್ಯೆಹ ಉತ್ಸವದೊಂದಿಗೆ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯನಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ‘ಬಸವಣ್ಣ ಸಾರಿದ ಸಾರ್ವಕಾಲಿಕ ಸತ್ಯಗಳು’ ವಿಷಯದ ಕುರಿತು ಸಂದೇಶ ನೀಡಿದರು.

ನಾವು ಜೀವಿತಕ್ಕಾಗಿ ದುಡಿಯಬೇಕು, ದುಡಿದದರಲ್ಲಿ ಸರಳ ಜೀವನ ನಡೆಸಬೇಕು, ದುಡಿದದರ ಗಳಿಕೆಯಲ್ಲಿ ಸ್ವಲ್ಪ ಉಳಿಸಬೇಕು ಹಾಗೂ ಉಳಿಸಿದನ್ನು ಧರ್ಮ ಕಾರ್ಯಗಳಿಗೆ ಬಳಸಬೇಕೆಂಬ ಉತ್ತಮ ಸಂದೇಶವನ್ನು ಅವರು ನೀಡಿದ್ದರು ಎಂದು ಹೇಳಿದರು.

ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಜಿ ಬುಜುರ್ಕೆ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಉಪನ್ಯಾಸಕ ರವೀಂದ್ರ ಶೆಣೈ ಸ್ವಾಗತಿಸಿದರು. ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಸತ್ಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ವಿಟಿಯು ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಮೂರ್ತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News