ಬೆಳ್ತಂಗಡಿ: ರುಡ್‌ಸೆಟ್‌ನಿಂದ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

Update: 2016-05-09 17:32 GMT

ಬೆಳ್ತಂಗಡಿ, ಮೇ 9: ರುಡ್‌ಸೆಟ್ ಸಂಸ್ಥೆ ಉಜಿರೆಂುಲ್ಲಿ ನಡೆಯಲಿರುವ 15 ದಿನಗಳ ಉಚಿತ ಲಘು ವಾಹನ ಚಾಲನಾ (ಕಾರು ಚಾಲನೆ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಊಟ ವಸತಿ ಮತ್ತು ತರಬೇತಿ ಸಂಪೂರ್ಣ ಉಚಿತ. ವಾಹನ ಚಾಲನಾ ಕ್ಷೇತ್ರದಲ್ಲಿ ಸ್ವ ಉದ್ಯೋಗ, ವೇತನ ಉದ್ಯೋಗ ಕೈಗೊಂಡು ಸ್ವಾವಲಂಬಿ ಬದುಕು ಕಂಡುಕೊಳ್ಳಲು ನೆರವಾಗಬಲ್ಲ ತರಬೇತಿಯಲ್ಲಿ ಕ್ಷೇತ್ರದ ಕುರಿತಾದ ಎಲ್ಲಾ ಮಗ್ಗುಲುಗಳ ಬಗ್ಗೆ ವಿವರ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದು. ಉದ್ಯಮಶೀಲತೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿ ಮಾಹಿತಿ ನೀಡಲಾಗುವುದು.

ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ 18 ರಿಂದ 45 ವರ್ಷಗಳ ವಯೋಮಿತಿಯ, ಎಂಟನೆ ತರಗತಿಯಲ್ಲಿ ತೇರ್ಗಡೆಯಾದ ಯುವಕ, ಯುವತಿಯರು ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಅಥವಾ ಸಂಸ್ಥೆಯ ವೆಬ್‌ಸೈಟ್‌ನಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ: ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ -574 240, ಬೆಳ್ತಂಗಡಿ ತಾಲೂಕು, ದ.ಕ. ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08256-236404ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News