ಕಾರ್ಕಳ ಪುರಸಭೆಯಿಂದ ನೀರಿನ ಅಸಮರ್ಪಕ ವಿತರಣೆ: ಯುವಕಾಂಗ್ರೆಸ್

Update: 2016-05-09 17:56 GMT

ಕಾರ್ಕಳ, ಮೇ : ಕುಡಿಯುವ ನೀರಿನ ಅಸಮರ್ಪಕ ವಿತರಣೆಯಿಂದ ಜನತೆಗೆ ತೊಂದರೆಯಾಗಿದ್ದು, ಪುರಸಭೆಯ ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ ಸಾರ್ವಜನಿಕರೊಂದಿಗೆ ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಶುಭದ ರಾವ್ ಎಚ್ಚರಿಸಿದ್ದಾರೆ.

ರಾಮಸಮುದ್ರದಲ್ಲಿ ಹೇರಳ ನೀರಿದ್ದರೂ, ಪುರಸಭಾಡಳಿತ ಅದನ್ನು ಸಮರ್ಪಕವಾಗಿ ಬಳಸುತ್ತಿಲ್ಲ. ಪುರಸಭೆ ವ್ಯಾಪ್ತಿಯ ಹಲವೆಡೆ ನೀರು ಬಾರದೆ ಒಂದು ವಾರವೇ ಕಳೆದಿದೆ. ನಮ್ಮ ಆಡಳಿತಾವಧಿಯಲ್ಲಿ ವಿನಾ: ಕಾರಣ ಬೊಬ್ಬಿಡುತ್ತಿದ್ದ ಬಿಜೆಪಿ ಸದಸ್ಯರ ಧ್ವನಿ, ಇದೀಗ ಯಾಕೆ ಕ್ಷೀಣಿಸಿದೆ ಎಂದು ನನ್ನ ಪ್ರಶ್ನೆ ಎಂದಿದ್ದಾರೆ.

ನಮ್ಮ ಏಳು ವರ್ಷದ ಆಡಳಿತಾವಧಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ಅದೇ ರೀತಿ ಪುರಸಭಾಡಳಿತ ಸ್ಪಂದಿಸಬೇಕು ಎಂಬುದು ನನ್ನ ಆಗ್ರಹ. ಪುರಸಭೆ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಶಾಸಕರ ವೌನ ನಿಲುವಿನಿಂದ ಜನತೆಗೆ ತೊಂದರೆಯಾಗುತ್ತಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News