ಎಸ್‌ಡಿಪಿಐ ಅಮೆಮಾರ್ ಘಟಕದಿಂದ ಉಚಿತ ನೀರು ಪೂರೈಕೆ
Update: 2016-05-10 18:12 IST
ಮಂಗಳೂರು, ಮೇ 10: ಪುದು ಗ್ರಾಮದ ಅಮೆಮಾರ್‌ನ ಎತ್ತರದ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಕಳೆದ ಕೆಲ ದಿನಗಳಿಂದ ನೀರಿನ ಅಬಾವ ಎದುರಿಸುತ್ತಿದ್ದು, ಎಸ್‌ಡಿಪಿಐ ಅಮೆಮಾರ್ ಘಟಕದ ವತಿಯಿಂದ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ವಿತರಿಸಲಾಯಿತು.
ಈ ಸಂದರ್ಭ ಎಸ್‌ಡಿಪಿಐ ವಲಯಾಧ್ಯಕ್ಷ ಸುಲೈಮಾನ್ ಉಸ್ತಾದ್, ಸಾಧಿಕ್ ಅಮೆಮಾರ್, ಅನ್ಸಾರ್ ಅಮೆಮಾರ್, ಇಕ್ಬಾಲ್ ಅಮೆಮಾರ್ ಉಪಸ್ಥಿತರಿದ್ದರು.