ನೀರಿನ ಸಮಸ್ಯೆ ಬಗೆಹರಿಸುವಂತೆ ಎಸ್‌ಡಿಪಿಐ ಅಮೆಮಾರ್ ಘಟಕದಿಂದ ಜಿಪಂ ಸಿಇಒಗೆ ಮನವಿ
Update: 2016-05-10 18:23 IST
ಮಂಗಳೂರು, ಮೇ 10: ಪುದು ಗ್ರಾಪಂ ವ್ಯಾಪ್ತಿಯ ಅಮೆಮಾರ್‌ನ ಜನರು ನೀರಿನ ಅಭಾವ ಎದುರಿಸುತ್ತಿದ್ದು, ಈ ಪ್ರದೇಶದಲ್ಲಿ 5 ಸಾರ್ವಜನಿಕ ಬಾವಿಗಳಿದ್ದರೂ ಯಾವುದೂ ಉಪಯೋಗಿಸುವಂತಿಲ್ಲ. ಈ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಪುದು ಗ್ರಾಪಂನ ಪಿಡಿಒ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ.
ಈ ನಿಟ್ಟಿನಲ್ಲಿ ಈ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಎಸ್‌ಡಿಪಿಐ ಅಮೆಮಾರ್ ಘಟಕದಿಂದ ದ.ಕ. ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಎಸ್‌ಡಿಪಿಐ ವಲಯಾದ್ಯಕ್ಷ ಸುಲೈಮಾನ್ ಉಸ್ತಾದ್, ಮಂಗಳೂರು ಕ್ಷೇತ್ರ ಸಮಿತಿ ಕಾರ್ಯದರ್ಶಿ ಖಾದರ್ ಅಮೆಮಾರ್, ಗ್ರಾಮ ಸಮಿತಿ ಸದಸ್ಯರಾದ್ ಇಕ್ಬಾಲ್ ಅಮೆಮಾರ್, ಸಲೀಮ್ ಕುಂಪನಮಜಲು, ಮುಹಮ್ಮದ್ ಶಾಫಿ ಅಮೆಮಾರ್ ಉಪಸ್ಥಿತರಿದ್ದರು.