ಮಂಜೇಶ್ವರ: ಶಾಲೆಯಿಂದ ಮೊಬೈಲ್ ಕಳವು
Update: 2016-05-10 20:31 IST
ಮಂಜೇಶ್ವರ, ಮೇ 10: ಉಪ್ಪಳ ಸರಕಾರಿ ಶಾಲೆಯಿಂದ ಎರಡು ಮೊಬೈಲ್ ಪೋನ್‌ಗಳು ಕಳವಾದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶಾಲಾ ಕಚೇರಿಯ ಕಪಾಟಿನಲ್ಲಿರಿಸಲಾಗಿದ್ದ ಎರಡು ಮೊಬೈಲ್ ಪೋನ್‌ಗಳು ಕಳವಾಗಿವೆ ಎಂದು ಮುಖ್ಯೋಪಾಧ್ಯಾಯಿನಿ ದೂರಿದ್ದಾರೆ.
ಶಾಲಾ ಮಕ್ಕಳಿಂದ ವಶಪಡಿಸಿದ ಮೊಬೈಲ್‌ಗಳನ್ನು ಶಾಲೆಯ ಕಪಾಟಿನಲ್ಲಿರಿಸಲಾಗಿತ್ತು. ಶನಿವಾರ ಸಂಜೆ ಶಾಲಾ ಕಚೇರಿ ಮುಚ್ಚಿ ತೆರಳಿದ್ದು, ಸೋಮವಾರ ಬೆಳಗ್ಗೆ ಶಾಲೆಗೆ ತೆರಳಿ ನೋಡಿದಾಗ ಕಪಾಟು ಮುರಿದು ಮೊಬೈಲ್ ಪೋನ್ ಕಳವುಗೈದಿರುವುದು ಗಮನಕ್ಕೆ ಬಂದಿದೆ ಎಂದು ಮುಖ್ಯೋಪಾಧ್ಯಾಯಿನಿ ದೂರಿದ್ದಾರೆ.