×
Ad

ಕಾರಿನಲ್ಲಿ ನಿಷೇಧಿತ ತಂಬಾಕು ಸಾಗಾಟ: ಇಬ್ಬರ ಬಂಧನ

Update: 2016-05-10 20:36 IST

ಮಂಜೇಶ್ವರ, ಮೇ 10: ಕಾರಿನಲ್ಲಿ ಸಾಗಿಸಲಾಗುತ್ತಿದ್ದ 31 ಸಾವಿರ ಪ್ಯಾಕೆಟ್ ನಿಷೇಧಿತ ತಂಬಾಕುಗಳ ಸಹಿತ ಇಬ್ಬರನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಉಳಿಯತ್ತಡ್ಕ ನಿವಾಸಿಗಳಾದ ಅಬೂಬಕರ್ (31) , ಇಬ್ರಾಹೀಂ ಖಲೀಲ್(30) ಎಂಬಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಚುನಾವಣಾ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ವಾಹನ ತಪಾಸಣೆ ವೇಳೆ ಪ್ರಕರಣವನ್ನು ಪತ್ತೆಹಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News