ರಾಜ್ಯದಲ್ಲಿ ಸೌಹಾರ್ದತೆ ನೆಲೆಗೊಳಿಸಲು ಯುಡಿಎಫ್‌ನಿಂದ ಮಾತ್ರ ಸಾಧ್ಯ: ಹೈದರಲಿ ಶಿಹಾಬ್ ತಂಙಳ್
ಮಂಜೇಶ್ವರ, ಮೇ 10: ಮಂಜೇಶ್ವರ ವಿಧಾನಸಬಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಪಿ.ಬಿ.ಅಬ್ದುರ್ರಝಾಕ್‌ರ ಚುನಾವಣಾ ಪ್ರಚಾರಾರ್ಥ ಬಂಗ್ರಮಂಜೇಶ್ವರದಲ್ಲಿ ಸೋಮವಾರ ನಡೆದ ಕುಟುಂಬ ಸಂಗಮವನ್ನು ಮುಸ್ಲಿಮ್ ಲೀಗ್‌ನ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಜಾತ್ಯಾತೀತ, ಮತಸೌಹಾರ್ದತೆ ನೆಲೆಗೊಳಿಸಲು ಯುಡಿಎಫ್‌ನಿಂದ ಮಾತ್ರ ಸಾಧ್ಯ. ಮಂಜೇಶ್ವರದಂತಹ ಬಹುಬಾಷಾ ಸಂಗಮ ಭೂಮಿಯಲ್ಲಿ ಕೋಮುಶಕ್ತಿಗಳು ವಿಜೃಂಭಿಸದಿರಲು ಈ ಬಾರಿಯೂ ಪಿ.ಬಿ.ಅಬ್ದುರ್ರಝಾಕ್ ಗೆದ್ದು ಬರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಪಿ.ಬಿ.ಅಬ್ದುರ್ರಝಾಕ್, ಯುಡಿಎಫ್ ನೇತಾರರಾದ ಎಂ.ಸಿ.ಕಮರುದ್ದಿನ್, ಕೇಶವಪ್ರಸಾದ್ ನಾಣಿಹಿತ್ಲು, ಟಿ.ಮೂಸಾ, ಎಂ.ಅಬ್ಬಾಸ್, ಸೈಪುಲ್ಲಾ ತಂಙಳ್, ಕಾಸರಗೋಡು ಜಿಪಂ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಫರೀದಾ ಝಾಕೀರ್ ಅಹ್ಮದ್, ಬ್ಲಾಕ್ ಪಂಚಾಯತು ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಾಜಿ ಅಧ್ಯಕ್ಷೆ ಆಯಿಷತ್ ತಾಹಿರಾ, ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಝೀಝ್ ಹಾಜಿ, ಪಿ.ಎಚ್.ಅಬ್ದುಲ್ ಹಮೀದ್ ಮುಂತಾದವರು ಉಪಸ್ಥಿತರಿದ್ದರು.