ಜೂನ್ 9ಕ್ಕೆ ವಿಧಾನಪರಿಷತ್ 4 ಸ್ಥಾನಗಳಿಗೆ ಚುನಾವಣೆ

Update: 2016-05-10 15:19 GMT

ಬೆಂಗಳೂರು, ಮೇ 10: ರಾಜ್ಯ ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕು ಸ್ಥಾನಗಳ ಅವಧಿಯು ಜು.4ರಂದು ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಜೂ.9ರಂದು ಚುನಾವಣೆಯನ್ನು ಘೋಷಿಸಿದೆ.
 ವಾಯವ್ಯ ಪದವೀಧರ ಕ್ಷೇತ್ರ-ಮಹಾಂತೇಶ್ ಕೌಜಲಗಿ(ಕಾಂಗ್ರೆಸ್), ದಕ್ಷಿಣ ಪದವೀಧರರ ಕ್ಷೇತ್ರ-ಗೋ.ಮಧುಸೂದನ್(ಬಿಜೆಪಿ), ವಾಯವ್ಯ ಶಿಕ್ಷಕರ ಕ್ಷೇತ್ರ-ಅರುಣ್ ಶಹಾಪುರ್(ಬಿಜೆಪಿ) ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರ-ಬಸವರಾಜ ಹೊರಟ್ಟಿ(ಜೆಡಿಎಸ್)ಯವರ ಸದಸ್ಯತ್ವ ಅವಧಿಯು ಜು.4ರಂದು ಅಂತ್ಯಗೊಳ್ಳುತ್ತಿದೆ.
ಚುನಾವಣಾ ಅಧಿಸೂಚನೆಯೂ ಮೇ 16ರಂದು ಹೊರಬೀಳಲಿದ್ದು, ಅಂದಿನಿಂದಲೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮೇ 23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಮೇ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮೇ 26 ಕೊನೆಯ ದಿನವಾಗಿದೆ.
ಮತದಾನವು ಜೂ.9ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಜೂ.13ರಂದು ಮತಗಳ ಎಣಿಕೆ ಕಾರ್ಯ ನಡೆದು, ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶಕ ಧಿರೇಂದರ್ ಓಝಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News