×
Ad

ಪುತ್ತೂರು: ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ 7 ಮಂದಿಯ ಬಂಧನ

Update: 2016-05-10 20:58 IST

ಪುತ್ತೂರು, ಮೇ 10: ನಗರದ ವಿವಿಧೆಡೆ ಸಂಶಯಾಸ್ಪದವಾಗಿ ತಿರುಗುತ್ತಿದ್ದ ಏಳು ಮಂದಿಯನ್ನು ಸೋಮವಾರ ರಾತ್ರಿ ಗಸ್ತು ನಿರತ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಡೀಲ್‌ನ ವಿಜಯನಗರ ಬಳಿ ತಿರುಗಾಡುತ್ತಿದ್ದ ಬಾಗಲಕೋಟೆಯ ಬಸವರಾಜ್ ಯಾನೆ ಬಸವನ ಗೌಡ, ಗದಗ ನಿವಾಸಿ ಮುತ್ತಪ್ಪ ಬಜಂತ್ರಿ, ಹಾಸನದ ಮೈಲಾರಿ ಬಂಧಿತರು.

ಕಲ್ಲಾರೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆಲಂಕಾರು ನಿವಾಸಿ ಗೋಪಾಲ ಪೂಜಾರಿ, ಡೆಹ್ರಾಡೂನ್ ನಿವಾಸಿ ಭರತ್ ಸಿಂಗ್ ಬಂಧಿತರು.

ಸಾಮೆತ್ತಡ್ಕ ಬಳಿಯಿದ್ದ ಕಾವುಮಾಡ್ನೂರು ನಿವಾಸಿ ಎನ್.ರಾಘವ, ಹುಬ್ಬಳ್ಳಿ ನಿವಾಸಿ ಬಸವರಾಜ್‌ರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News