ಈಶ್ವರಮಂಗಲ ದೇವಳಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ಭೇಟಿ
Update: 2016-05-10 21:02 IST
ಈಶ್ವರಮಂಗಲ, ಮೇ 10: ಲಕ್ಷಾಂತರ ರೂ. ವೌಲ್ಯದ ದೇವರ ಆಭರಣ ಹಾಗೂ ಇನ್ನಿತರ ಸೊತ್ತುಗಳು ಕಳವು ನಡೆದಿರುವ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಂಗಳವಾರ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಂಡರು.
ಧಾರ್ಮಿಕ ಧತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ದೇವಸ್ಥಾನದಿಂದ ರವಿವಾರ ರಾತ್ರಿ ಸುಮಾರು 3.5 ಲಕ್ಷ ರೂ. ಮೊತ್ತದ ದೇವರ ಆಭರಣ ಹಾಗೂ ನಗದು ಕಳವು ನಡೆದಿತ್ತು.
ನೆಟ್ಟಣಿಗೆ ಮುಡ್ನೂರು ಗ್ರಾಪಂ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಕಾಂಗ್ರೆಸ್ ಮುಖಂಡರಾದ ಮಹೇಶ್ ರೈ ಅಂಕೊತ್ತಿಮಾರ್, ರೋಶನ್ ರೈ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.