ಏರ್ ಇಂಡಿಯಾ ಆಹಾರದ ವಿರುದ್ಧ 31 ದೂರುಗಳು

Update: 2016-05-10 15:55 GMT

ಹೊಸದಿಲ್ಲಿ,ಮೇ 10: ಏರ್ ಇಂಡಿಯಾದ ದೇಶೀಯ ಯಾನಗಳಲ್ಲಿ ಪೂರೈಸಲಾಗುವ ಆಹಾರದ ಗುಣಮಟ್ಟ ಕುರಿತಂತೆ ದೂರುಗಳ ಸಂಖ್ಯೆ ಕಳೆದ ಆರ್ಥಿಕ ವರ್ಷದಲ್ಲಿ 31ಕ್ಕೆ ಇಳಿದಿದೆ. ಅದರ ಹಿಂದಿನ ವರ್ಷ ಇಂತಹ 34 ದೂರುಗಳು ದಾಖಲಾಗಿದ್ದವು ಎಂದು ಸಹಾಯಕ ನಾಗರಿಕ ವಾಯುಯಾನ ಸಚಿವ ಮಹೇಶ ಶರ್ಮಾ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.
ಇತರ ಅಂತರರಾಷ್ಟ್ರೀಯ ಮತ್ತು ದೇಶೀಯ ಯಾನಗಳಲ್ಲಿ ಆಹಾರವನ್ನೊದಗಿಸುವ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆಗಳೇ ಏರ್ ಇಂಡಿಯಾಕ್ಕೂ ಆಹಾರವನ್ನು ಪೂರೈಸುತ್ತಿವೆ. ಆಗಾಗ್ಗೆ ಅಹಾರದ ದಿಢೀರ್ ತಪಾಸಣೆಗಳನ್ನೂ ನಡೆಸಲಾಗುತ್ತದೆ, ಜೊತೆಗೆ ಕೇಟರಿಂಗ್ ಸಂಸ್ಥೆಗಳ ಆವರಣಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕುರಿತು ನಿಯಮಿತವಾಗಿ ಭೇಟಿ ನೀಡಿ ಪರೀಕ್ಷಿಸಲಾಗುತ್ತದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News