ಕಾಸರಗೋಡು: ಮುಹಿಮ್ಮಾತ್ ಉರೂಸ್‌ಗೆ ಚಾಲನೆ
Update: 2016-05-10 22:24 IST
ಕಾಸರಗೋಡು, ಮೇ 10: ಪುತ್ತಿಗೆ ಮುಹಿಮ್ಮಾತುಲ್ ಮುಸ್ಲಿಮೀನ್‌ನ ಸ್ಥಾಪನಾ ಶಿಲ್ಪಿ ಸೈಯದ್ ತ್ವಾಹಿರುಲ್ ಅಹ್ದಲ್ (ಖ.ಸಿ) ರವರ ಹತ್ತನೇ ಉರೂಸ್ ಮುಬಾರಕ್‌ಗೆ ಸೈಯದ್ ಕಲ್ಲಕಟ್ಟ ತಂಙಳ್ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು.
ಅಧ್ಯಕ್ಷತೆಯನ್ನು ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದ್ ವಹಿಸಿದ್ದರು. ಸೈಯದ್ ಹಾಮಿದ್ ಕೋಯಮ್ಮ ತಂಙಳ್ ಮಾಟ್ಟೂಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜಿಲ್ಲೆಯಲ್ಲೇ ಉಚಿತ ಹಾಗು ಉನ್ನತ ಶಿಕ್ಷಣ ನೀಡುವ ವಿದ್ಯಾಸಂಸ್ಥೆ ಮುಹಿಮ್ಮಾತ್ ಎಂದು ಕಾಸರಗೋಡು ಎಂಪಿ ಟಿ.ಕರುಣಾಕರನ್ ನುಡಿದರು.
ವೇದಿಕೆಯಲ್ಲಿ ಸಿ.ಅಬ್ದುಲ್ಲಾ ಮುಸ್ಲಿಯಾರ್, ಬಾಯಾರ್ ಉಸ್ತಾದ್, ಅಬ್ದುರ್ರಹ್ಮಾನ್ ಅಹ್ಸನಿ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಸ್ವಾಗತಿಸಿದರು. , ಮೂಸ ಸಖಾಫಿ ಕಳತ್ತೂರ್ ವಂದಿಸಿದರು.