×
Ad

ಎಳೆಯ ಮನಸ್ಸುಗಳನ್ನು ರಚನಾತ್ಮಕವಾಗಿ ಬೆಳೆಸಲು ಸಂಘಟನೆಗಳು ಮುಂದಾಗಬೇಕು: ನಾಗರಾಜ ಸುವರ್ಣ

Update: 2016-05-10 22:56 IST

ಮಂಗಳೂರು, ಮೇ 10: ಎಳೆಯ ಮಕ್ಕಳ ಮನಸ್ಸುಗಳನ್ನು ರಚನಾತ್ಮಕವಾಗಿ ಬೆಳೆಸಲು ಜವಾಬ್ದಾರಿಯುತ ನೆಲೆಯಲ್ಲಿ ಸಂಘಟನೆಗಳು ಮುಂದಾಗಬೇಕು ಎಂದು ಸ್ಪಂದನ ಸಂಸ್ಥೆಯ ನಿರ್ದೇಶಕ ನಾಗರಾಜ ಸುವರ್ಣ ಕರೆ ನೀಡಿದ್ದಾರೆ.

ನಗರದ ಯೆಯ್ಯಾಡಿ ಕೊಂಚಾಡಿಯಲ್ಲಿ ಎಸ್‌ಎಫ್‌ಐ ಮತ್ತು ಡಿವೈಎಫ್‌ಐ ಆಶ್ರಯದಲ್ಲಿ ನಡೆಯುವ 5 ದಿನಗಳ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್‌ಫ್‌ಐನ ಜಿಲ್ಲಾ ಸಮಿತಿ ಸದಸ್ಯ ಸಂತೋಷ್ ಡಿಸೋಜ ಪಂಜಿಮೊಗರು, ಮಕ್ಕಳಲ್ಲಿ ಇರುವ ಪ್ರತಿಭೆಗಳು ಈ ಶಿಬಿರದ ಮೂಲಕ ಹೊರಬರಬೇಕೆಂದು ತಿಳಿಸಿದರು.

ವೇದಿಕೆಯಲ್ಲಿ ಯುವ ಉದ್ಯಮಿ ದಯಾನಂದ ಆಚಾರಿ ಗುರುಬಾವು, ಸಮಾಜ ಸೇವಕ ಉಮೇಶ್ ಭಂಡಾರಿ, ಡಿವೈಎಫ್‌ಐ ಕೊಂಚಾಡಿ ಘಟಕ ಕಾರ್ಯದರ್ಶಿ ರಂಜನ್ ಕೊಪ್ಪಲಕಾಡು ಎಸ್‌ಎಫ್‌ಐನ ಯತೀಶ್ ಉಪಸ್ಥಿತರಿದ್ದರು.

ನಿವೇಶನ ರಹಿತರ ಹೋರಾಟ ಸಮಿತಿಯ ನಗರ ಪದಾಧಿಕಾರಿ ನೂತನ್ ಬಾರೆಬೈಲು ಅಧ್ಯಕ್ಷತೆ ವಹಿಸಿದ್ದರು. ನವೀನ್ ಬೊಲ್ಪುಗುಡ್ಡೆ ಸ್ವಾಗತಿಸಿ, ವಂದಿಸಿದರು.

ಐದು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಂಗತಜ್ಞರಾದ ಮುರಾರಿ ಕಾಸರಗೋಡು, ಅಬ್ದುಲ್ ಖಾದರ್ ಎ.ಎ., ತುಳು ಮತ್ತು ಕನ್ನಡ ಚಿತ್ರನಟ ಶೇಖರ ಭಂಡಾರಿ ಕಾರ್ಕಳ, ಕೃಷ್ಣಯ್ಯ ಲಾಯಿಲ, ಸುನಂದ ಕೆ., ಶಶಿಕುಮಾರ್ ಗುಂಡಳಿಕೆ ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News