×
Ad

ಬಂಟ್ವಾಳ ತಾಪಂ ಅಧ್ಯಕ್ಷರಾಗಿ ಚಂದ್ರಹಾಸ್ ಕರ್ಕೇರ ಆಯ್ಕೆ: ಮುಡಿಪುವಿನಲ್ಲಿ ಸಂಭ್ರಮಾಚರಣೆ

Update: 2016-05-10 23:05 IST

ಕೊಣಾಜೆ, ಮೇ 10: ಬಂಟ್ವಾಳ ತಾಪಂ ಅಧ್ಯಕ್ಷರಾಗಿ ಚಂದ್ರಹಾಸ್ ಕರ್ಕೇರ ಆಯ್ಕೆಯಾದ ಹಿನ್ನೆಲೆಯಲ್ಲಿ ಮುಡಿಪುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ತಾಪಂನ ನೂತನ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಕಳೆದ ಹಲವಾರು ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು ಇದೀಗ ರಮಾನಾಥ ರೈ ಅವರ ಸಹಕಾರದೊಂದಿಗೆ ತಾಪಂ ಅಧ್ಯಕ್ಷನಾಗಿ ಜವಾಬ್ದಾರಿಯನ್ನು ಪಡೆದುಕೊಂಡಿದ್ದೇನೆ. ಕಾರ್ಯಕರ್ತರ ಸಹಕಾರದೊಂದಿಗೆ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಂಟ್ವಾಳ ತಾಲೂಕಿನಲ್ಲಿರುವ ನೀರಿನ ಸಮಸೈ ಸೇರಿದಂತೆ ಜನರಿಗೆ ಮೂಲೂತ ಸೌಲ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಪದ್ಮನಾಭ ನರಿಂಗಾನ ಈ ಸಂದಭರ್ದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಚಂದ್ರಹಾಸ್ ಕರ್ಕೇರ ಕಳೆದ ಅವಧಿಯಲ್ಲೇ ಅಧ್ಯಕ್ಷರಾಗಬೇಕಿತ್ತು. ಆದರೆ ಎಲ್ಲರ ಒಪ್ಪಿಗೆಯ ಮೇರೆಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಎಲ್ಲರಿಗೂ ಸಂತಸ ತಂದಿದೆ. ಅವರ ಅವಧಿಯಲ್ಲಿ ಉತ್ತಮ ಅಭಿವೃಧ್ಧಿ ಕೆಲಸಗಳು ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಶಾಂತ್ ಕಾಜವ, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಮುಡಿಪು ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಬಾಳೆಪುಣಿ ಗ್ರಾಪಂ ಉಪಾಧ್ಯಕ್ಷ ಬಶೀರ್, ಸಮೀರ್ ಪಜೀರ್, ರಹಿಮಾನ್ ತೋಟಾಲ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News