ಮುಡಿಪು: ಗಾಂಜಾ ಸಾಗಾಟ ಆರೋಪಿಗಳ ಸೆರೆ
ಕೊಣಾಜೆ, ಮೇ 10: ಮುಡಿಪು ಸಮೀಪದ ಕಾಯರ್‌ಗೋಳಿ ಎಂಬಲ್ಲಿ ಬೈಕ್‌ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತರಲ್ಲಿದ್ದ ಗಾಂಜಾ ಸೇರಿದಂತೆ ತಲವಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಆರೋಪಿಗಳನ್ನು ಬೆಳ್ಮ ಗ್ರಾಮದ ರೆಂಜಾಡಿ ಕಂಡಿಲಾ ಹೌಸ್ ನಿವಾಸಿ ಮುಹಮ್ಮದ್ ಇಮ್ತಿಯಾಝ್ (27), ಮಂಜೇಶ್ವರ ಸಮೀಪದ ಉಪ್ಪಳದ ಮಹಿ ನಗರ ನಿವಾಸಿ ಮುಹಮ್ಮದ್ ಸಿರಾಜ್(23),ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ನಿವಾಸಿ ಹಫೀಝ್ ಯಾನೆ ಅಭಿ (30) ಎಂದು ಗುರುತಿಸಲಾಗಿದೆ.
ಕುರ್ನಾಡುವಿನ ಮಿತ್ತಕೋಡಿ ಮತ್ತು ಹೂವಿನಕೊಪ್ಪಳದಿಂದ ಅಕ್ರಮವಾಗಿ ಗಾಂಜಾ ಮಾರಾಟಕ್ಕೆಂದು ಕೊಂಡೊಯ್ಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸ್ ಠಾಣಾ ನಿರೀಕ್ಷಕ ಅಶೋಕ್ ಪಿ. ಠಾಣಾ ಸಿಬ್ಬಂದಿಯೊಂದಿಗೆ ಮುಡಿಪು ವಿನ ಕಾಯರ್‌ಗೋಳಿ ಎಂಬಲ್ಲಿ ವಾಹನ ತಪಾಸಣೆ ನಡೆಸು ತ್ತಿದ್ದರು. ಈ ಸಂದರ್ಭ ಬೋಳಿಯಾರು ಕಡೆಯಿಂದ 2 ಮೋಟಾರ್ ಬೈಕ್(ಕೆಎಲ್-14ಜಿ-0301 ಮತ್ತು ಕೆಎ- 19-ಇಕೆ-8420)ನಲ್ಲಿದ್ದ ಯುವಕರು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದರು. ಹಿಡಿದು ತಪಾಸಣೆ ನಡೆಸಿ ದಾಗ 1 ಕೆ.ಜಿ. ನೂರು ಗ್ರಾಂ ಗಾಂಜಾ ಮತ್ತು ಒಂದು ಹರಿತ ವಾದ ತಲವಾರು ಪತ್ತೆಯಾಯಿತು. ಕೃತ್ಯಕ್ಕೆ ಬಳಸಲಾಗುವ ಎರಡು ಮೋಟಾರ್ ಬೈಕ್‌ಗಳನ್ನು ವಶಪಡಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.