ಹಾವು ಕಡಿತ: ಗಾಯಾಳು ಮೃತ್ಯು
Update: 2016-05-10 23:53 IST
ಹೆಬ್ರಿ, ಮೇ 10: ಹಾವು ಕಚ್ಚಿದ ಪರಿ ಣಾಮ ತೀವ್ರವಾಗಿ ಅಸ್ವಸ್ಥ ಗೊಂಡು ಕೋಮಾ ಸ್ಥಿತಿಯಲ್ಲಿದ್ದ ಶಿವಪುರ ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಶಾರದಾ ಸೇರಿಗಾರ್ತಿ(70) ಎಂಬವರು ಮೇ 10ರಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದಾರೆ.
ಇವರು ಫೆ.22ರಂದು ಮನೆ ಸಮೀಪದ ತೋಟದಿಂದ ಹುಲ್ಲನ್ನು ಕೊಯ್ದು ತರುತ್ತಿದ್ದಾಗ ಕಾಲಿಗೆ ನಾಗರ ಹಾವೊಂದು ಕಚ್ಚಿತ್ತೆನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡಿದ್ದ ಇವರು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.