×
Ad

ಉದ್ಯೋಗ ಖಾತರಿ ಯೋಜನೆ: ತೋಟಗಾರಿಕಾ ಬೆಳೆಗಳಿಗೆ ಅವಕಾಶ

Update: 2016-05-11 00:25 IST

ಮಂಗಳೂರು, ಮೇ 10: ಮಹಾತ್ಮಾಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2016-17ನೆ ಸಾಲಿನಲ್ಲಿ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಈ ಯೋಜನೆಯಡಿ ಅಡಿಕೆ, ತೆಂಗು, ಗೇರು, ತಾಳೆಬೆಳೆ, ಲವಂಗ, ಕಾಳುಮೆಣಸು, ನುಗ್ಗೆ, ಅಂಗಾಂಶ ಬಾಳೆ, ಕೋಕೊ ಮುಂತಾದ ಬೆಳೆಗಳ ಹೊಸ ತೋಟಗಳನ್ನು ಅಭಿವೃದ್ಧಿ ಪಡಿಸಲು ಕೂಲಿ ವೆಚ್ಚ ಹಾಗೂ ಪರಿಕರ ವೆಚ್ಚಗಳನ್ನು ಪಡೆಯಬಹುದಾಗಿದೆ. ಯೋಜನೆಯಡಿ ಪ್ರತೀ ಎಕರೆಗೆ ಬೆಳೆಗೆ ಅನುಗುಣವಾಗಿ ಅಂದಾಜು 7,000 ರೂ. ನಿಂದ 75,000 ರೂ.ವರೆಗೆ ಕೂಲಿವೆಚ್ಚ ಹಾಗೂ 5,000 ರೂ.ನಿಂದ 50,000 ರೂ.ವರೆಗೆ ಪರಿಕರ ವೆಚ್ಚ ಪಡೆಯಬಹುದಾಗಿದೆ. ಸಣ್ಣ ರೈತರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು, ಸೀ ಪ್ರಧಾನ ಕುಟುಂಬಸ್ಥರು, ಭೂ ಸುಧಾರಣೆ ಲಾನುಭವಿಗಳು, ಅಂಗವಿಕಲ ರೈತರು ತಮ್ಮ ವೈಯಕ್ತಿಕ ಜಮೀನಿನಲ್ಲಿ ಬಹುವಾರ್ಷಿಕ ಬೆಳೆಗಳನ್ನು ನಾಟಿ ಮಾಡಿ ಅದಕ್ಕೆ ತಗಲುವ ಕೂಲಿ ವೆಚ್ಚ ಹಾಗೂ ಪರಿಕರ ವೆಚ್ಚವನ್ನು ಪಡೆಯಬಹುದಾಗಿದೆ. ಇದರಿಂದ ರೈತರ ಜಮೀನು ಅಭಿವೃದ್ಧಿಯಾಗುವುದಲ್ಲದೇ ಆರ್ಥಿಕ ಮಟ್ಟ ಸುಧಾರಣೆಗೆ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ 2016-17ನೆ ಸಾಲಿನಲ್ಲಿ ತೋಟಗಾರಿಕೆ ಬೆಳೆ ವಿಸ್ತರಣೆ ಕೈಗೊಳ್ಳಲು ಆಸಕ್ತಿ ಇರುವ ರೈತರು ಕೂಡಲೇ ತಾಲೂಕು ತೋಟಗಾರಿಕಾ ಇಲಾಖೆ ಕಚೇರಿಗಳಲ್ಲಿ ಕಾಮಗಾರಿಗಳನ್ನು ನೋಂದಾಯಿಸಲು ಕೋರಲಾಗಿದೆ. ಈ ರೀತಿ ಅಭಿವೃದ್ಧಿ ಪಡಿಸುವ ತೋಟಗಳಿಗೆ ಇಲಾಖೆಯು ಇತರ ಯೋಜನೆಯಡಿ ಪರಿಕರ ವೆಚ್ಚ ಹಾಗೂ ಹನಿ ನೀರಾವರಿ ಅಳವಡಿಸಲು ಸಹಾಯಧನ ನೀಡಲು ಅವಕಾಶ ಇರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News